ಓಟು ಕೇಳಲು ಬಂದ ಬಿ.ಜೆ.ಪಿ. ಅಭ್ಯರ್ಥಿಗೆ ಚಪ್ಪಲಿ ಹಾರದ ಸನ್ಮಾನ
ಮತ ಕೇಳಲು ಮನೆ ಬಾಗಿಲಿಗೆ ಬಂದ ಬಿ.ಜೆ.ಪಿ. ಅಭ್ಯರ್ಥಿಗೆ ಶೂಗಳ ಹಾರ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ, ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಿಂದ 272 ಕಿಲೋ ಮೀಟರ್ ದೂರದಲ್ಲಿರುವ ಧಾರ್ ಜಿಲ್ಲೆಯ ಧಮನೋಡ್ ನಲ್ಲಿ ನಡೆದಿದೆ. ಪೌರಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಬಿ.ಜೆ.ಪಿ. ಅಭ್ಯರ್ಥಿ ದಿನೇಶ್ ಶರ್ಮಾ ಪ್ರಚಾರಕ್ಕೆಂದು ಮನೆ ಮನೆಗೆ ಭೇಟಿ ನೀಡಿದ್ದಾರೆ. ಅವರು ಮತಯಾಚನೆ ಮಾಡುವ ಸಂದರ್ಭದಲ್ಲಿ ಸ್ಥಳೀಯ ನಿವಾಸಿಯೊಬ್ಬರು ಶೂಗಳ ಹಾರವನ್ನು ಹಾಕಿದ್ದಾರೆ.
ವಾರ್ಡ್ ನಲ್ಲಿ ನೀರಿನ ಸಮಸ್ಯೆ ತೀವ್ರತರವಾಗಿದ್ದರೂ, ಸ್ಪಂದಿಸಿಲ್ಲ ಎಂಬುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹಾಗಾಗಿ ಶೂಗಳ ಹಾರ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ದಿನೇಶ್ ಶರ್ಮಾ, ಅವರು ನನ್ನ ತಂದೆ ಇದ್ದಂತೆ ಅವರೊಂದಿಗೆ ಕುಳಿತು ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ. ಜನವರಿ 17 ರಂದು 19 ವಾರ್ಡ್ ಗಳಿಗೆ ಚುನಾವಣೆ ನಡೆಯಲಿದೆ. ನೀರಿನ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ.
Comments