‘ಅಗ್ನಿ ದಿವ್ಯ’ ಪುಸ್ತಕದಲ್ಲಿ ನನ್ನ ಹೋರಾಟವನ್ನುಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ : ಎಚ್ ಡಿಡಿ

‘ಅಗ್ನಿ ದಿವ್ಯ’ ಪುಸ್ತಕದಲ್ಲಿ ನನ್ನ ಹೋರಾಟ, ರಾಜ ಕೀಯವನ್ನು ವೈಎಸ್ವಿ ದತ್ತ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ ಎಂದು ಎಚ್.ಡಿ. ದೇವೇಗೌಡ ಹೇಳಿದರು. ಜಿಲ್ಲಾ ಜೆಡಿಎಸ್ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ನನ್ನನ್ನು ನಡು ದಾರಿಯಲ್ಲಿ ಯಾರು ಕೈಬಿಟ್ಟರು ಮುಂತಾದ ಅಂಶಗಳನ್ನು ಪುಸ್ತಕ ಒಳಗೊಂಡಿದೆ ಎಂದು ಮಾಹಿತಿ ನೀಡಿದರು.
ಶಾಸಕ ದತ್ತ ಮಾತನಾಡಿ, ದೇವೇಗೌಡರ ಆತ್ಮಚರಿತ್ರೆಯ ಹೆಸರು ‘ಅಗ್ನಿ ದಿವ್ಯ’. ಜನವರಿ ಅಂತ್ಯ ಅಥವಾ ಫೆಬ್ರವರಿ ಮೊದಲ ವಾರ ರೈತರಿಂದ ಪುಸ್ತಕ ಬಿಡುಗಡೆ ಮಾಡಿಸುವ ಇಚ್ಛೆಯಿದೆ. ಪುಸ್ತಕ ಬಿಡುಗಡೆಯಾದ ಮೇಲೆ ರಾಜ್ಯ ರಾಜಕಾರಣಕ್ಕೆ ಹೊಸ ದಿಕ್ಕು, ತಿರುವು ಸಿಗಲಿದೆ. ರಾಜಕೀಯದಲ್ಲಿ ಏನೇನು ನಡೆಯಿತು, ಸಿದ್ದರಾಮಯ್ಯ ಎಲ್ಲಿದ್ದರು, ನಾವು ಎಲ್ಲಿದ್ದೆವು, ಸೋನಿಯಾ ಗಾಂಧಿ ಎಲ್ಲಿದ್ದರು? ಎಂಬ ಮಾಹಿತಿ ಹೊರಬೀಳಲಿದೆ ಎಂದರು.
ಪಕ್ಷ ಉಳಿಸುವ ಬಯಕೆ
ಆರೋಗ್ಯ ಸರಿ ಇಲ್ಲ. ಹೆಚ್ಚಿನ ಶಕ್ತಿಯೂ ಉಳಿದಿಲ್ಲ. ಪಕ್ಷ ಉಳಿಸ ಲೇಬೇಕೆಂಬ ಬಯಕೆ ನನ್ನದು ಎಂದು ದೇವೇಗೌಡ ಹೇಳಿದರು. ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಮಗನನ್ನು ಸಿಎಂ ಮಾಡುವ ಬಯಕೆ ಮಾತ್ರ ಹೊಂದಿದ್ದಾರೆಂದು ಕೆಲವರು ಟೀಕಿಸು ತ್ತಾರೆ. ಬೆಂಗಳೂರಿನಲ್ಲಿ ನಮ್ಮ ಕಟ್ಟಡದಿಂದ ಹೊರಬಂದ ಮೇಲೆ ಜೆಡಿಎಸ್ ಉಳಿಯುವುದಿಲ್ಲವೆಂದಿದ್ದರು. ದೇವರ ಅನುಗ್ರಹ, ಜನರ ಪ್ರೀತಿಯಿಂದ ಹೊಸ ಕಚೇರಿಗೂ ಬಂದಿದ್ದೇವೆ ಎಂದರು.
Comments