ಇಂತಹ ಮುಖ್ಯಮಂತ್ರಿಯನ್ನು ಹಿಂದೆಂದೂ ನೋಡಿಲ್ಲ, ಮುಂದೆ ನೋಡಲ್ಲ : ಎಚ್ ಡಿಡಿ

ಸರ್ಕಾರಿ ಯಂತ್ರ ದುರ್ಬಳಕೆ ಮಾಡಿಕೊಂಡ ಇಂತಹ ಮುಖ್ಯಮಂತ್ರಿಯನ್ನು ಹಿಂದೆಂದೂ ನೋಡಿಲ್ಲ, ಮುಂದೆ ನೋಡಲ್ಲ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸರ್ಕಾರಿ ಅಧಿಕಾರಿಗಳನ್ನು ವೇದಿಕೆಯಲ್ಲಿ ಕೂರಿಸಿಕೊಂಡು ಸಾಧನಾ ಸಮಾವೇಶ ಮಾಡುತ್ತಿದ್ದಾರೆ. ಸಾವಿರಾರು ಕೋಟಿ ರೂ. ಕಾಮಗಾರಿಗಳಿಗೆ ಶಿಲಾನ್ಯಾಸ ಮಾಡಿ ಪಕ್ಷಕ್ಕೆ ಮತ ಕೊಡಿ ಎಂದು ಕೇಳುತ್ತಿರುವುದು ಇದೇ ಪ್ರಥಮ ಸಿಎಂ ಎಂದು ಟೀಕಿಸಿದರು.
4.5 ವರ್ಷದಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಮಾಡಲು ಇವರಿಂದ ಸಾಧ್ಯವಾಗಿಲ್ಲ. ಚುನಾವಣೆಗೆ 120 ದಿನ ಬಾಕಿ ಇರುವಾಗಲೇ ಮಾಡುತ್ತಿರುವುದೇಕೆ? ಈಗಾಗಲೇ 1.46 ಲಕ್ಷ ಕೋಟಿ ರೂ. ಸಾಲ ಮಾಡಿಟ್ಟಿದ್ದಾರೆ. ಮುಂಬರುವ ಸರ್ಕಾರದ ಗತಿ ಏನು ಎಂದು ಪ್ರಶ್ನಿಸಿದರು. ಕರಾವಳಿಯಲ್ಲಿ ನಾಲ್ಕು ತಿಂಗಳಿಂದೀಚೆಗೆ 6 ಕೊಲೆಯಾಗಿದೆ. ಇಲ್ಲಿ ಸರ್ಕಾರದ ವೈಫಲ್ಯ ಎದ್ದು ಕಾಣುತ್ತದೆ ಎಂದ ಗೌಡರು, ಕೆಲ ಮಾಧ್ಯಮಗಳಲ್ಲಿ ಸಮೀಕ್ಷೆಗಳು ಬರುತ್ತಿದ್ದು ಜೆಡಿಎಸ್ 20, 25 ಸ್ಥಾನ ಪಡೆಯುತ್ತದೆಂದು ಹೇಳಿವೆ. ಇದನ್ನು ನಾವು ಗಂಭೀರವಾಗಿ ಪರಿಗಣಿಸಲ್ಲ. ಸಮೀಕ್ಷೆಗಳನ್ನು ಯಾರೂ ನೆಚ್ಚಿಕೊಳ್ಳಲ್ಲ ಎಂದರು.
Comments