ಜೆಡಿಎಸ್ ಬಂಡಾಯ ಶಾಸಕ ಎಚ್.ಸಿ.ಬಾಲಕೃಷ್ಣ ಕಾರಿನ ಮೇಲೆ ಚಪ್ಪಲಿ ಎಸೆತ

ಮಾಗಡಿ ಪುರಸಭೆ ಅದ್ಯಕ್ಷ ಚುನಾವಣೆಯಲ್ಲಿ ದಲಿತರಿಗೆ ಮಾತು ಕೊಟ್ಟು ಬೇರೆಯವರಿಗೆ ಮಣೆ ಹಾಕಿದ್ದಕ್ಕೆ ಬಂಡಾಯ ಶಾಸಕ ಎಚ್.ಸಿ.ಬಾಲಕೃಷ್ಣ ಕಾರಿನ ಮೇಲೆ ಚಪ್ಪಲಿ ಎಸೆದಿರುವ ಘಟನೆ ಮಾಗಡಿಯಲ್ಲಿ ನಡೆದಿದೆ.
ಮಾಗಡಿ ಪುರಸಭೆ ಅಧ್ಯಕ್ಷ ಸ್ಥಾನದ ಚುನಾವಣೆ ನಡೆದಿತ್ತು. ಚುನಾವಣೆಗೆ ಮುನ್ನ ದಲಿತ ಮುಖಂಡರಾದ ರಂಗಹನುಮಯ್ಯನವರ ಪತ್ನಿಗೆ ಅಧ್ಯಕ್ಷ ಸ್ಥಾನದ ಭರವಸೆ ನೀಡಲಾಗಿತ್ತು. ಆದರೆ ನಡೆದ ಚುನಾವಣೆಯಲ್ಲಿ ಕುರುಬ ಸಮುದಾಯದ ಮಂಜುನಾಥ್ ಗೆ ಅಧ್ಯಕ್ಷ ಪಟ್ಟ ನೀಡಲಾಯಿತು.ದಲಿತ ಅಭ್ಯರ್ಥಿಗೆ ಅಧ್ಯಕ್ಷ ಸ್ಥಾನ ತಪ್ಪಿದ್ದರಿಂದ ದಲಿತರು ಪುರಸಭೆಯಿಂದ ಹೊರಟಿದ್ದ ಶಾಸಕ ಬಾಲಕೃಷ್ಣರ ಕಾರನ್ನು ಅಡ್ಡಗಟ್ಟಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಇನ್ನೂ ಕಾರಿಗೆ ಹಾಕಿದ್ದ ಹೂವಿನ ಹಾರವನ್ನು ಕಿತ್ತೆಸೆದರು. ನಂತರ ಮುಂದೆ ಸಾಗುತ್ತಿದ್ದ ಕಾರಿನ ಮೇಲೆ ಚಪ್ಪಲಿ ಎಸೆಯಲಾಗಿದೆ. ಆದರೆ ಕಾರು ಮುಂದೆ ಸಾಗಿದರಿಂದ ದೂರದಲ್ಲಿ ಚಪ್ಪಲಿ ಬಿದ್ದಿದೆ. ಬಾಲಕೃಷ್ಣರಿಗೆ ಮಾತ್ರವಲ್ಲದೆ ಸಚಿವ ಎಚ್.ಎಂ.ರೇವಣ್ಣ ಹಾಗೂ ಸಂಸದ ಡಿ.ಕೆ ಸುರೇಶ್ ವಿರುದ್ಧ ಧಿಕ್ಕಾರ ಕೂಗಿ, ಅವಾಚ್ಯ ಶಬ್ದಗಳಿಂದ ನಿಂದಿಸುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
Comments