ಜನವರಿ 26 ರಿಂದ ಇಂದಿರಾ ಮೊಬೈಲ್ ಕ್ಯಾಂಟೀನ್ ಆರಂಭ
ಬಿಬಿಎಂಪಿಯ 24 ವಾರ್ಡ್ ಗಳಲ್ಲಿ ಜ. 26 ರಿಂದ ಇಂದಿರಾ ಮೊಬೈಲ್ ಕ್ಯಾಂಟೀನ್ ಗಳು ಆರಂಭವಾಗಲಿದ್ದು, ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ.ಮೊದಲ ಹಂತದಲ್ಲಿ 198 ವಾರ್ಡ್ ಗಳ ಪೈಕಿ 101 ಕಡೆ ಇಂದಿರಾ ಕ್ಯಾಂಟೀನ್ ಗಳನ್ನು ಉದ್ಘಾಟಿಸಲಾಗಿತ್ತು.
ಬಳಿಕ ಅ. 2 ರಂದು 50 ಕಡೆ ಶುರುಮಾಡಲಾಯಿತು. ಉಳಿದ 49 ವಾರ್ಡ್ ಗಳಲ್ಲಿ 24 ವಾರ್ಡ್ ಗಳಲ್ಲಿ ಕ್ಯಾಂಟಿನ್ ನಿರ್ಮಾಣಕ್ಕೆ ಜಾಗ ಸಿಕ್ಕಿಲ್ಲ. ಹಾಗಾಗಿ ಈ ಪ್ರದೇಶದಲ್ಲಿ ಮೊಬೈಲ್ ಕ್ಯಾಂಟಿನ್ ಗಳನ್ನು ತೆರೆಯಲಾಗುತ್ತಿದೆ. ಜನವರಿ 26 ರ ಗಣರಾಜೋತ್ಸವದಂದು ನಡೆಯುವ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಇಂದಿರಾ ಮೊಬೈಲ್ ಕ್ಯಾಂಟೀನ್ ಉದ್ಘಾಟಿಸಲಿದ್ದಾರೆ.
Comments