ಸಿಎಂ ಮನೆ ಹೊರಗಿನ ಅಲಂಕಾರಕ್ಕೆ ವರ್ಷಕ್ಕೆ ಎಷ್ಟು ಖರ್ಚು ಮಾಡ್ತಾರೆ ಗೊತ್ತಾ?

ಸಿ.ಎಂ ಸಿದ್ದರಾಮಯ್ಯ ಅವರ ಮನೆಯ ಹೊರಗಿನ ಅಲಂಕಾರಕ್ಕೆ ಕೋಟಿ ಕೋಟಿ ಹಣ ಖರ್ಚು ಮಾಡಿರೋದು ಆರ್‍ಟಿಐ ಮಾಹಿತಿಯಡಿ ಬಯಲಾಗಿದೆ. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಮರಿಲಿಂಗೇಗೌಡಮಾಲೀಪಾಟೀಲ್ ಎನ್ನುವವರು ಮಾಹಿತಿ ಪಡೆದುಕೊಂಡು ಮಾಧ್ಯಮಗಳಿಗೆ ಈ ವಿಷಯ ತಿಳಿಸಿದ್ದಾರೆ.
ಇನ್ನು ಇದೇ ವೇಳೆ ಸಿಎಂ ನಿವಾಸಗಳಾದ ಕಾವೇರಿ, ಕೃಷ್ಣ ನಿವಾಸಗಳ ಹೋರಗಿನ ಚಿಕ್ಕ ಚಿಕ್ಕ ಕೆಲಸಕ್ಕೂ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾರೆ ಎನ್ನುವ ಮಾತು ಕೇಳಿ ಬಂದಿದ್ದು, ಕಾವೇರಿ, ಕೃಷ್ಣದ ಕೌಂಪೌಂಡ್‍ಗೆ ಬಣ್ಣ ಬಳಿಯಲು, ಮೇಲ್ಛಾವಣಿ ಸರಿ ಮಾಡಲು, ಕಾರ್ ಗ್ಯಾರೇಜ್ ಸರಿ ಮಾಡಲು, ಮಳೆ ನೀರು ಕೋಯ್ಲು ಅಳವಡಿಸಿಕೊಳ್ಳಲು ಬರೋಬ್ಬರಿ ಒಂದು ಕೋಟಿ ರೂ.ಮಾಡಿದ್ದಾರೆ ಎನ್ನಲಾಗಿದೆ.
ಇದಲ್ಲದೇ ಸಿಎಂ ಮನೆ ಮುಂದೆ ಎಷ್ಟೋ ಕೆಲಸಗಳು ಆಗದೆ ಬಿಲ್ ಮಾಡಿಕೊಂಡಿದ್ದಾರೆ. ಪೊಲೀಸ್ ಚೌಕಿ ನಿರ್ಮಾಣದ ಹೆಸರಲ್ಲಿ, ಇನ್ನಿತರ ಕೆಲಸಗಳಿಗೆ ಎರೆಡರೆಡು ಬಾರಿ ಬಿಲ್ ಮಾಡಿ ಹಣ ಲೂಟಿ ಮಾಡಿದ್ದಾರೆ. 5 ಲಕ್ಷ ಮೇಲ್ಪಟ್ಟ ಕಾಮಗಾರಿಗೆ ಟೆಂಡರ್ ಕರೆಯಬೇಕು. ಆದರೆ 5 ಲಕ್ಷದ ಒಳಗೆ ಎಲ್ಲಾ ಕಾಮಗಾರಿ ಮುಗಿಸಿ ಕೆಲಸ ಮಾಡಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ತನಿಖೆಗೆ ಸಾಮಾಜಿಕ ಕಾರ್ಯಕರ್ತ ಮರಿಲಿಂಗೇಗೌಡಮಾಲೀಪಾಟೀಲ್ ಒತ್ತಾಯಿಸಿದ್ದಾರೆ.
Comments