ವಿಧಾನಸೌಧದಲ್ಲಿ ಅಪ್ಪ ಮಂತ್ರಿ, ಮಗ ಜವಾನ

ರಾಜಸ್ಥಾನದ ಬಿಜೆಪಿ ಶಾಸಕ ಜಗದೀಶ್ ನಾರಾಯಣ್ ಮೀನಾ ಅವರ ಪುತ್ರ ರಾಮಕೃಷ್ಣ ಮೀನಾ ವಿಧಾನಸೌಧದಲ್ಲಿ ಜವಾನನಾಗಿ ಕಾರ್ಯ ನಿರ್ವಹಿಸಲು ಆಯ್ಕೆಯಾಗಿದ್ದ ವಿಚಾರ ಮಾಧ್ಯಮಗಳಲ್ಲಿ ಭಾರೀ ಪ್ರಚಾರ ಪಡೆದಿತ್ತು. ಆದರೆ ಈ ಆಯ್ಕೆಯೇ ಅಕ್ರಮ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪ ಮಾಡುತ್ತಿದೆ.
ಶಾಸಕರು ತಮ್ಮ ಪ್ರಭಾವ ಬೀರಿ ಮಗನನ್ನು ಈ ಹುದ್ದೆಗೆ ನೇಮಕ ಮಾಡಿಸಿದ್ದಾರೆಂದಿರುವ ಕಾಂಗ್ರೆಸ್ ನಾಯಕರು ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸುತ್ತಿದ್ದಾರೆ. ಈ ಆರೋಪಕ್ಕೆ ಕಾರಣವಾಗಿರುವ ಅಂಶವೂ ಕುತೂಹಲಕಾರಿಯಾಗಿದೆ ವಿಧಾನಸೌಧದಲ್ಲಿ ನಾಲ್ಕನೇ ದರ್ಜೆಯ ಒಟ್ಟು 18 ಹುದ್ದೆಗಳು ಮಾತ್ರ ಖಾಲಿಯಿದ್ದು, ಇದಕ್ಕೆ ಬರೋಬ್ಬರಿ 12,453 ಮಂದಿ ಅರ್ಜಿ ಸಲ್ಲಿಸಿದ್ದರು. ಈ ಹುದ್ದೆಗೆ 10 ನೇ ತರಗತಿ ವಿದ್ಯಾರ್ಹತೆಯನ್ನು ನಿಗದಿ ಮಾಡಲಾಗಿತ್ತು. ಆದರೆ ಅರ್ಜಿ ಹಾಕಿದವರ ಪೈಕಿ 129 ಮಂದಿ ಇಂಜಿನಿಯರ್ ಗಳು, 23 ವಕೀಲರು, ಓರ್ವ ಚಾರ್ಟೆಡ್ ಅಕೌಂಟೆಂಟ್, ಸ್ನಾತಕೋತ್ತರ ಪದವಿ ಪಡೆದವರೂ ಸೇರಿದಂತೆ 393 ಮಂದಿ ಪದವೀಧರರಿದ್ದಾರೆ. ಇದು ರಾಜಸ್ಥಾನದಲ್ಲಿ ನಿರುದ್ಯೋಗ ಸಮಸ್ಯೆ ಎಷ್ಟು ತೀವ್ರವಾಗಿದೆಯೆಂಬ ಆತಂಕ ಕಾಡುವುದರ ಜೊತೆಗೆ ಇಷ್ಟು ಮಂದಿಯಲ್ಲಿ ಶಾಸಕರ ಪುತ್ರ ಆಯ್ಕೆಯಾಗಿದ್ದೇಗೆ ಎಂದು ಕಾಂಗ್ರೆಸ್ ಪ್ರಶ್ನಿಸುತ್ತಿದೆ.
Comments