ಜೈಲಲ್ಲಿ ಚಳಿಯಾದ್ರೆ ತಬಲಾ ಬಾರಿಸಿ ಲಾಲು

ಬಹುಕೋಟಿ ಮೇವು ಹಗರಣದಲ್ಲಿ ಪ್ರಮುಖ ಅಪರಾಧಿ ಆಗಿರುವ ಆರ್ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರನ್ನು ಗುರುವಾರ ಸಿಬಿಐ ನ್ಯಾಯಾಧೀಶರು ವಿಚಾರಣೆ ನಡೆಸುವ ವೇಳೆ ಹಾಸ್ಯ ಪ್ರಸಂಗವೊಂದು ಜರುಗಿದೆ. ಜೈಲಿನಲ್ಲಿರುವ ಲಾಲೂ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಶಿಕ್ಷೆ ಪ್ರಮಾಣದ ಕುರಿತಾಗಿ ನ್ಯಾಯಾಧೀಶರು ವಿಚಾರಣೆ ನಡೆಸುತ್ತಿದ್ದರು. ಈ ವೇಳೆ ಲಾಲೂ ನ್ಯಾಯಾಧೀಶ ಶಿವಪಾಲ್ ಸಿಂಗ್ ಜತೆ ಜೈಲಿನಲ್ಲಿ ತುಂಬಾ ಚಳಿಯಾಗುತ್ತಿರುವುದಾಗಿ ಹೇಳಿದ್ದಾರೆ.
ತಕ್ಷಣ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಚಳಿಯಾಗುತ್ತಿದ್ದರೆ ತಬಲಾ ಬಾರಿಸಿ ಅಂತಾ ಲಾಲೂಗೆ ಸಲಹೆ ನೀಡಿದ್ದು, ನ್ಯಾಯಾಲಯವನ್ನು ನಗೆಗಡಲಲ್ಲಿ ತೇಲುವಂತೆ ಮಾಡಿತು. ಶಿಕ್ಷೆಯನ್ನು ಘೋಷಿಸುವ ನಿರ್ಧಾರವನ್ನು ಮುಂದೂಡುವ ನಿರ್ಧಾರದಿಂದ ಯಾವುದೇ ಸಮಸ್ಯೆ ಇದೆಯೆ ಎಂದು ನ್ಯಾಯಾಧೀಶರು ಕೇಳಿದಾಗ ಪ್ರತಿಕ್ರಿಯಿಸಿದ ಲಾಲೂ ಇಲ್ಲ ಸರ್ ನೀವು ಕರೆದಾಗಲೆಲ್ಲಾ ನಾನು ಸಂತೋಷದಿಂದ ಬರುತ್ತೇನೆ. ಆದರೆ, ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನನ್ನನು ನಿರ್ದೇಶಿಸಬೇಡ ಎಂದು ಕೇಳಿಕೊಂಡಿದ್ದಾರೆ.ಇದೇ ವೇಳೆ ಲಾಲೂ ಬೆಂಬಲಿಗರು ನ್ಯಾಯಾಲಯ ಮುಂಭಾಗದಲ್ಲಿ ಘೋಷಣೆ ಕೂಗುವುದನ್ನು ಗಮನಿಸಿದ ನ್ಯಾಯಾಧೀಶರು ಲಾಲೂ ಅವರಿಗೆ ಎಚ್ಚರಿಕೆ ನೀಡಿದರು.
ಇಂದು ಶಿಕ್ಷೆ ಪ್ರಮಾಣ ಪ್ರಕಟ
ಬಹುಕೋಟಿ ಮೇವು ಹಗರಣದಲ್ಲಿ ಜೈಲುಪಾಲಾಗಿರೋ ಬಿಹಾರ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಸೇರಿದಂತೆ 15 ಮಂದಿ ಅಪರಾಧಿಗಳ ಶಿಕ್ಷೆ ಪ್ರಮಾಣ ಇಂದು ಪ್ರಕಟವಾಗಲಿದೆ. ಪ್ರಕರಣ ಸಂಬಂಧ ಡಿಸೆಂಬರ್ 23 ರಂದು ತೀರ್ಪು ನೀಡಿದ್ದ ರಾಂಚಿ ಕೋರ್ಟ್ ಲಾಲು ಪ್ರಸಾದ್ ಸೇರಿದಂತೆ 15 ಮಂದಿಯನ್ನ ಅಪರಾಧಿ ಅಂತ ಘೋಷಿಸಿತ್ತು. ನಂತರ ಜನವರಿ 3 ರಂದು ಶಿಕ್ಷೆ ಪ್ರಮಾಣವನ್ನ ಪ್ರಕಟಿಸೋದಾಗಿ ದಿನಾಂಕ ನಿಗದಿಗೊಳಿಸಿತ್ತು. ಆದರೆ, ಹಿರಿಯ ವಕೀಲರೊಬ್ಬರು ನಿಧರಾಗಿದ್ದರಿಂದ ತೀರ್ಪನ್ನ ಇವತ್ತಿಗೆ ಮುಂದೂಡಲಾಗಿತ್ತು. ಆದ್ರೆ, ನಿನ್ನೆಯೂ ಸಹ ಶಿಕ್ಷೆ ಪ್ರಮಾಣ ಪ್ರಕಟಿಸದೇ ತೀರ್ಪನ್ನ ಇಂದು ಕಾಯ್ದಿರಿಸಿದೆ.
Comments