ಇಂದಿನಿಂದ ಎಚ್‌ಡಿಕೆ 2ನೇ ಹಂತದ ಯಾತ್ರೆ ಆರಂಭ
ಮುಂದಿನ ವಿಧಾನಸಭೆ ಚುನಾವಣೆಗೆ ಪಕ್ಷ ಸಜ್ಜುಗೊಳಿಸಲು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರಂಭಿಸಿರುವ "ಕರ್ನಾಟಕ ವಿಕಾಸ ವಾಹಿನಿ'ಯಾತ್ರೆಯ ಎರಡನೇ ಹಂತ ಶುಕ್ರವಾರದಿಂದ ಪ್ರಾರಂಭವಾಗಲಿದೆ.
ಮೂರು ದಿನಗಳ ಕಾಲ ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಯಾತ್ರೆ ನಡೆಸಲಿರುವ ಕುಮಾರಸ್ವಾಮಿ ನಾಲ್ಕು ಕಡೆ ಕಾರ್ಯಕರ್ತರ ಸಮಾವೇಶ ನಡೆಸಲಿದ್ದಾರೆ.ಶುಕ್ರವಾರ ಬೆಳಗಾವಿಯ ಕಾಗವಾಡದಲ್ಲಿ ಕಾರ್ಯಕರ್ತರ ಸಮಾವೇಶ ನಂತರ ಬಾಗಲಕೋಟೆಯ ಬಾದಾಮಿಯಲ್ಲಿ ವಾಸ್ತವ್ಯ, ಶನಿವಾರ ಬಾದಾಮಿಯ ಕೆರೂರು ಹಾಗೂ ಮುಧೋಳದಲ್ಲಿ ಕಾರ್ಯಕರ್ತರ ಸಮಾವೇಶ, ಭಾನುವಾರ ತೇರದಾಳದ ಬನಹಟ್ಟಿಯಲ್ಲಿ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಜಮಖಂಡಿಯಲ್ಲಿ ವಾಲ್ಮೀಕಿ ಸಮುದಾಯದ ಕುಂಭಮೇಳಕ್ಕೆ ಚಾಲನೆ ನೀಡಲಿದ್ದಾರೆ. ಭಾನುವಾರ ಸಂಜೆ ಬೆಂಗಳೂರಿಗೆ ವಾಪಸಾಗಲಿರುವ ಕುಮಾರಸ್ವಾಮಿ ನಂತರ ಜ.17 ರಿಂದ 31 ರವರೆಗೆ ಉತ್ತರ ಕರ್ನಾಟಕ ಭಾಗದಲ್ಲಿ ನಿರಂತರ ಪ್ರವಾಸ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Comments