ಸದ್ಯದಲ್ಲೇ ಬಿಸಿಸಿಐ ಧೋನಿಗೆ ಶಾಕ್ ನೀಡಲಿದೆ

04 Jan 2018 5:12 PM | Politics
340 Report

ಒಂದ್ಕಡೆ ಭಾರತ ಕ್ರಿಕೆಟ್ ತಂಡ ವೇತನ ಹೆಚ್ಚಳ ಮಾಡುವಂತೆ ಒತ್ತಾಯಿಸುತ್ತಿದೆ. ಇನ್ನೊಂದೆಡೆ ಮಹೇಂದ್ರ ಸಿಂಗ್ ಧೋನಿ ಅತಿ ಹೆಚ್ಚು ವೇತನ ಪಡೆಯುವ ಆಟಗಾರರ ವಿಭಾಗದಿಂದ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ. ಸದ್ಯ ಧೋನಿ ಬಿಸಿಸಿಐ ನ ಟಾಪ್ ಎ ವಿಭಾಗದಲ್ಲಿದ್ದಾರೆ.

ಎ ವಿಭಾಗದ ಆಟಗಾರರಿಗೆ ವಾರ್ಷಿಕ 2 ಕೋಟಿ ವೇತನ ನೀಡಲಾಗುತ್ತಿದೆ. ಬಿ ಕೆಟಗರಿ ಪ್ಲೇಯರ್ ಗಳಿಗೆ 1 ಕೋಟಿ ಹಾಗೂ ಸಿ ವಿಭಾಗದ ಕ್ರಿಕೆಟಿಗರಿಗೆ ತಲಾ 50 ಲಕ್ಷ ವೇತನ ದೊರೆಯುತ್ತಿದೆ. A , A, B, C, ಹೀಗೆ ನಾಲ್ಕು ವಿಭಾಗಗಳನ್ನು ಮಾಡಬೇಕೆಂಬ ಪ್ರಸ್ತಾಪ ಬಿಸಿಸಿಐ ಮುಂದಿದೆ. ಹಾಗೇನಾದ್ರೂ ಆದಲ್ಲಿ ಧೋನಿ 2014 ರಲ್ಲೇ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಪಡೆದಿರುವುದರಿಂದ ಟಾಪ್ ಕೆಟಗರಿ ಎನಿಸಿಕೊಳ್ಳುವ A ನಲ್ಲಿ ಸ್ಥಾನ ಪಡೆಯುವುದಿಲ್ಲ. ವಿರಾಟ್ ಕೊಹ್ಲಿ, ಧೋನಿ ಹಾಗೂ ರವಿ ಶಾಸ್ತ್ರಿ, ಬಿಸಿಸಿಐ ಉನ್ನತಾಧಿಕಾರಿಗಳನ್ನು ಭೇಟಿಯಾಗಿ ವೇತನ ಹೆಚ್ಚಳಕ್ಕೆ ಮನವಿ ಮಾಡಿದ ಬಳಿಕ ಈ ಬೆಳವಣಿಗೆ ನಡೆದಿದೆ.

Edited By

Shruthi G

Reported By

Madhu shree

Comments