ಗಣರಾಜ್ಯಾತ್ಸವಕ್ಕೆ ತೆರೆ ಕಾಣಲಿರುವ ಕನಕ
ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಕನಕ ಸಹ ಒಂದು. ತಾಜ್ ಮಹಲ್, ಚಾರ್ ಮಿನಾರ್ ಖ್ಯಾತಿಯ ಸ್ಟಾರ್ ಡೈರಕ್ಟರ್ ಆರ್ ಚಂದ್ರು ಅವರ ಸಾರಥ್ಯದಲ್ಲಿ ಈ ಚಿತ್ರ ಮೂಡಿ ಬರುತ್ತಿದ್ದು , ದುನಿಯಾ ವಿಜಯ್ ಅವರು ಅಣ್ಣಾವ್ರ ಅಭಿಮಾನಿಯಾಗಿ, ಆಟೋ ಡ್ರೈವರ್ ಕನಕನಾಗಿ ಕಾಣಿಸಿಕೊಂಡಿದ್ದು ನಿರೀಕ್ಷೆ ಹುಟ್ಟಿಸಿದ್ದಾರೆ.
ಇನ್ನು ಚಿತ್ರದಲ್ಲಿ ಹರಿಪ್ರಿಯಾ ಹಾಗೂ ಕೆಂಡಸಂಪಿಗೆ ಮಾನ್ವಿತಾ ಹರೀಶ್ ಅವರು ನಾಯಕಿಯರಾಗಿ ಅಭಿನಯಿಸಿದ್ದು, ಗಾಯಕ ನವೀನ್ ಸಜ್ಜು ಸಂಗೀತ ನೀಡಿದ್ದಾರೆ. ಈಗಾಗಲೇ ಎಣ್ಣೆ ಹಾಡು ಸಖತ್ ಫೇಮಸ್ ಆಗಿದೆ. ಈ ತಿಂಗಳಾಂತ್ಯಕ್ಕೆ, ಅಂದರೆ ಗಣರಾಜ್ಯಾತ್ಸವದ ಪ್ರಯುಕ್ತ ಈ ಚಿತ್ರ ತೆರೆ ಕಾಣಲು ತಯಾರಿ ನಡೆಸಿದೆ. ಇನ್ನು ಬಹು ದಿನಗಳ ನಂತರ ಕೆ.ಪಿ. ನಂಜುಂಡಿ ಅವರೂ ಸಹ ಕಾಣಿಸಿಕೊಂಡಿದ್ದು ಕುತೂಹಲ ಹೆಚ್ಚಿಸುವಂತೆ ಮಾಡಿದ್ದಾರೆ.
Comments