ಲಾಲೂ ಪ್ರಸಾದ್ ಗೆ ಶಿಕ್ಷೆ ಪ್ರಮಾಣ ಪ್ರಕಟ ಮುಂದೂಡಿದ ನ್ಯಾಯಾಲಯ

89 ಲಕ್ಷ ರು, ಮೌಲ್ಯದ ದೇವಘರ್ ಮೇವು ಹಗರಣದ ಪ್ರಮುಖ ಆರೋಪಿಯಾಗಿರುವ ಬಿಹಾರದ ಮಾಜಿ ಮುಖ್ಯಮಂತ್ರಿ, ಆರ್ ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಗೆ ಶಿಕ್ಷೆ ಪ್ರಮಾಣ ಪ್ರಕಟವನ್ನು ಗುರುವಾರಕ್ಕೆ (ಜನವರಿ 4) ಮುಂದೂಡಲಾಗಿದೆ.
ಲಾಲೂ ಪ್ರಸಾದ್ ಯಾದವ್ ಸೇರಿದಂತೆ 15 ಆರೋಪಿಗಳ ಶಿಕ್ಷೆ ಪ್ರಮಾಣ ಪ್ರಕಟವನ್ನು ಗುರುವಾರಕ್ಕೆ ಮುಂದೂಡಿ ರಾಂಚಿ ಸಿಬಿಐ ವಿಶೇಷ ನ್ಯಾಯಾಲಯ ಇಂದು (ಬುಧವಾರ) ಆದೇಶ ಹೊರಡಿಸಿದೆ. ಲಾಲೂ ಪ್ರಸಾದ್ ಯಾದವ್ ಸೇರಿದಂತೆ 15 ಜನರನ್ನು ದೋಷಿ ಎಂದು ರಾಂಚಿ ಸಿಬಿಐ ವಿಶೇಷ ಕೋರ್ಟ್ ಡಿಸೆಂಬರ್ 23ರಂದು ಅಂತಿಮ ತೀರ್ಪನ್ನು ನೀಡಿ ಶಿಕ್ಷೆ ಪ್ರಮಾಣವನ್ನು ಜನವರಿ 3ಕ್ಕೆ ಪ್ರಕಟಿಸಲಾಗುವುದು ಎಂದು ಹೇಳಿತ್ತು. ಅದರಂತೆ ಬುಧವಾರ ಪ್ರಕಟಿಸಬೇಕಿದ್ದ ಶಿಕ್ಷೆ ಪ್ರಮಾಣವನ್ನು ಕೋರ್ಟ್ ಕೆಲ ಕಾರಣಾಂತರಗಳಿಂದ ನಾಳೆಗೆ ಅಂದರೆ ಗುರುವಾರಕ್ಕೆ ಮುಂದೂಡಿದೆ
Comments