ವೈರಲ್ ಆಗಿದೆ ರಜನಿಕಾಂತ್ ಪಕ್ಷದ ಚಿಹ್ನೆ

ಕಮಲದ ಚಿಹ್ನೆ ಬಿ.ಜೆ.ಪಿ.ಯನ್ನು ಬಿಂಬಿಸುತ್ತದೆ ಎಂಬ ಕಾರಣದಿಂದ ಕಮಲದ ಹೂವಿನ ಬದಲಿಗೆ ನೀಲಿ ಬ್ಯಾಕ್ ಗ್ರೌಂಡ್ ನಲ್ಲಿ ಬಾಬಾ ಮುದ್ರೆಯನ್ನು ಇರುವ ಚಿಹ್ನೆಯನ್ನು ಬಳಸಲಾಗಿದೆ. ಅಭಿಮಾನಿಗಳೊಂದಿಗೆ ಸಂವಾದ ನಡೆಸಿದ ಬಳಿಕ ಡಿಸೆಂಬರ್ 31 ರಂದು ರಜನಿಕಾಂತ್ ಹೊಸ ಪಕ್ಷದೊಂದಿಗೆ ರಾಜಕೀಯ ಪ್ರವೇಶಿಸುವುದಾಗಿ ಘೋಷಿಸಿದ್ದಾರೆ.
ಸೂಪರ್ ಸ್ಟಾರ್ ರಜನಿಕಾಂತ್ ಹೊಸ ಪಕ್ಷದ ಚಿಹ್ನೆಯನ್ನು ಬದಲಿಸಲಾಗಿದೆ. ಮೊದಲಿಗೆ ಕಮಲದ ಹೂವಿನ ಮೇಲೆ ಬಾಬಾ ಮುದ್ರೆ ಇರುವ ಚಿಹ್ನೆಯನ್ನು ಬಳಸಲಾಗಿತ್ತು. ಈಗಾಗಲೇ ಪಕ್ಷದ ವೆಬ್ ಸೈಟ್, ಮೊಬೈಲ್ ಆಪ್ ಲಾಂಚ್ ಮಾಡಿ, ಸದಸ್ಯತ್ವ ನೋಂದಣಿಗೆ ಚಾಲನೆ ನೀಡಲಾಗಿದೆ. ರಜನಿಕಾಂತ್ ಅವರಿಗೆ ಹೆಚ್ಚಿನ ಬೆಂಬಲ ವ್ಯಕ್ತವಾಗಿದೆ. ಇದೇ ವೇಳೆ ಬಿ.ಜೆ.ಪಿ.ಯನ್ನು ಬಿಂಬಿಸುತ್ತದೆ ಎಂಬ ಕಾರಣಕ್ಕೆ ಪಕ್ಷದ ಚಿಹ್ನೆಯನ್ನು ಬದಲಿಸಲಾಗಿದೆ.
Comments