ಕಾಂಗ್ರೆಸ್ ಮುಖಂಡ ಅಂಬರೀಶ್ ಪ್ರಶ್ನೆಗೆ ಉತ್ತರಿಸುತ್ತಾರಾ ಮೋದಿ ..?

ಮೋದಿಯವರ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿ, ಮಾಜಿ ವಸತಿ ಸಚಿವ, ಹಾಲೀ ಕಾಂಗ್ರೆಸ್ ಶಾಸಕ ಅಂಬರೀಶ್ ಬೇಸರ ವ್ಯಕ್ತಪಡಿಸಿದ್ದಾರೆ. ಒಂದು ರಾಜ್ಯಕ್ಕೆ ಒಂದು ನಿಯಮ ಇನ್ನೊಂದು ರಾಜ್ಯಕ್ಕೆ ಇನ್ನೊಂದು ನ್ಯಾಯ ಎನ್ನುವ ಕೇಂದ್ರ ಸರಕಾರದ ನಿಲುವು ತಪ್ಪಲ್ಲವೇ ಎಂದು ಅಂಬರೀಶ್ ಪ್ರಶ್ನಿಸಿದ್ದಾರೆ.
ಕುಡಿಯುವ ನೀರಿನ ವಿಚಾರಕ್ಕೆ ಬಂದಾಗ ಸ್ವಾರ್ಥ ಬಿಡಬೇಕು ತಮ್ಮತಮ್ಮ ರಾಜ್ಯದ ವಿಚಾರಕ್ಕೆ ಬಂದಾಗ ಎಲ್ಲರೂ ಸ್ವಾರ್ಥರಾಗಿತ್ತಾರೆ, ಅದಕ್ಕೆ ನನ್ನ ತಕರಾರಿಲ್ಲ. ಆದರೆ, ನದಿನೀರಿನ ವಿಚಾರದಲ್ಲಿ ಅದರಲ್ಲೂ ಕುಡಿಯುವ ನೀರಿನ ವಿಚಾರಕ್ಕೆ ಬಂದಾಗ ಸ್ವಾರ್ಥ ಬಿಟ್ಟು, ಎಲ್ಲರೂ ಜೊತೆಯಾಗಿ ಸಾಗಬೇಕಾಗುತ್ತದೆ. 2014ರ ಲೋಕಸಭಾ ಚುನಾವಣೆಯ ವೇಳೆ ನಿಮ್ಮ ಹವಾದಿಂದ (ನರೇಂದ್ರ ಮೋದಿ) ಕರ್ನಾಟಕದಿಂದ ಹದಿನೇಳು ಬಿಜೆಪಿ ಸಂಸದರು ಆಯ್ಕೆಯಾದರು. ಇಷ್ಟೊಂದು ಸಂಖ್ಯೆಯಲ್ಲಿ ಬಿಜೆಪಿ ಸಂಸದರು ಆಯ್ಕೆಯಾದರೂ, ಕಾವೇರಿ ಅಥವಾ ಮಹದಾಯಿ ನದಿನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಏನಾದರೂ ಲಾಭವಾಗಿದೆಯಾ?, ಮಹದಾಯಿ ವಿಚಾರದಲ್ಲಿ ಗೋವಾ ಮತ್ತು ಮಹಾರಾಷ್ಟ್ರದಲ್ಲಿ ನಿಮ್ಮದೇ ಸರಕಾರವಿದೆ. ಕನಿಷ್ಠವಾದರೂ ಕುಡಿಯುವ ನೀರಿನ ವಿಚಾರಕ್ಕೆ ಮಾನವೀಯತೆ ದೃಷ್ಟಿಯಿಂದ ಸ್ವಾರ್ಥವನ್ನು ಬಿಡಿ ಎಂದು ಎರಡೂ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕೇಳುವ ಕೆಲಸ ನಿಮ್ಮಿಂದ ಆಗಿದೆಯಾ?,
ಪಕ್ಕದ ತಮಿಳುನಾಡಿನಲ್ಲಿ ಪ್ರಾಕೃತಿಕ ವಿಕೋಪ ಎದುರಾದಾಗ, ಚೆನ್ನೈಗೆ ಹೋಗಿ ಪರಿಸ್ಥಿತಿಯನ್ನು ಅವಲೋಕಿಸಿ ಪರಿಹಾರ ಬಿಡುಗಡೆ ಮಾಡುತ್ತೀರಾ. ಅದಕ್ಕಿಂತ ಹೆಚ್ಚು ವಿಕೋಪಗಳು ಕರ್ನಾಟಕದಲ್ಲಿ ಆಗಿದೆ. ಇಲ್ಲಿಗೆ ಯಾವತ್ತಾದರೂ ನೀವು ಬಂದಿದ್ದೀರಾ, ಕರ್ನಾಟಕದವರು ಭಾರತೀಯರಲ್ಲವೇ?,ಗೋವಾದಲ್ಲಿ ಇಬ್ಬರು, ಮಹಾರಾಷ್ಟ್ರದಲ್ಲಿ 23 ಮತ್ತು ಕರ್ನಾಟಕದಲ್ಲಿ ಬಿಜೆಪಿಯ 17 ಸಂಸದರು ಕಳೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. ಆದರೂ, ಕರ್ನಾಟಕದ ಮೇಲೆ ಕೇಂದ್ರ ಸರಕಾರ ತೋರುತ್ತಿರುವ ಮಲತಾಯಿ ಧೋರಣೆ ಸರಿಯೇ? ಎಂದು ಕಾಂಗ್ರೆಸ್ ಮುಖಂಡ ಅಂಬರೀಷ್ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಇವೆಲ್ಲಾ ಪ್ರಶ್ನೆಗಳಿಗೆ ಮೋದಿ ಉತ್ತರ ಕೊಡ್ತಾರಾ ಎಂಬುವುದನ್ನು ಕಾದು ನೋಡಬೇಕಿದೆ.
Comments