ವಿವಿಧ ಸಂಸ್ಥೆಗಳ ಲಾಭಾಂಶದ ಚೆಕ್ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ

ಸಿಎಂ ಸಿದ್ದರಾಮಯ್ಯ ಇಂದು ವಿವಿಧ ಸಂಸ್ಥೆಗಳ ಲಾಭಾಂಶದ ಚೆಕ್ ಸ್ವೀಕರಿಸಿದರು. ವಿಧಾನಸೌಧದಲ್ಲಿ ಮಂಗಳವಾರ ತಮ್ಮ ಕಚೇರಿಯಲ್ಲಿ ಈ ಚೆಕ್‍ಗಳನ್ನು ಸ್ವೀಕರಿಸಿದರು. ಮೊದಲು ಕರ್ನಾಟಕ ವಿದ್ಯುತ್ ನಿಗಮ 47,69,44.860 ರೂ.ಗಳ ಡಿವಿಡೆಂಡ್ ಚೆಕ್ ನ್ನು ಸರ್ಕಾರಕ್ಕೆ ಸಲ್ಲಿಸಿತು. ನಿಗಮದ ಪರವಾಗಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಸಲ್ಲಿಸಿದ ಚೆಕ್ ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವೀಕರಿಸಿದರು.
ಇದಾದ ನಂತರ ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆಯ 23,680,260 ರೂ.ಗಳ ಡಿವಿಡೆಂಡ್ ಚೆಕ್ ನ್ನು ಕೈಗಾರಿಕ ಸಚಿವ ಆರ್.ವಿ. ದೇಶಪಾಂಡೆ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದರು. ಕೊನೆಯಲ್ಲಿ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಕೂಡ ಲಾಭಾಂಶದ ಚೆಕ್ನ್ನು ಸಿಎಂಗೆ ಸಲ್ಲಿಸಿತು.
Comments