ಬಸ್ ಬದಲು ಹೆಲಿಕಾಪ್ಟರ್'ನಲ್ಲಿ ರಾಜ್ಯ ಪ್ರವಾಸ ಮಾಡಲಿರುವ ಬಿಎಸ್ ವೈ

ಪರಿವರ್ತನಾ ಯಾತ್ರೆ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಮತ್ತೊಂದು ರಾಜ್ಯ ಪ್ರವಾಸ ಕೈಗೊಳ್ಳಲಿದ್ದು ಆಗ ಬಸ್ ಬದಲು ಹೆಲಿಕಾಪ್ಟರ್'ನಲ್ಲಿ ರಾಜ್ಯ ಪ್ರವಾಸ ಮಾಡುವಂತೆ ಅಮಿತ್ ಶಾ ಸೂಚನೆ ನೀಡಿದ್ದಾರೆ. ಅಮಿತ್ ಶಾ ಸೂಚನೆಯಂತೆ ರಾಜ್ಯ ಸುತ್ತಲು ಹೆಲಿಕಾಪ್ಟರ್ ಬಳಸುವಂತೆ ಬಿಎಸ್ವೈಗೆ ಮನವಿ ಮಾಡಲಾಗಿದ್ದು, ಗೆಲ್ಲಬಹುದಾದ 150 ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರ ಹೆಲಿಕಾಪ್ಟರ್'ನಲ್ಲೇ ಪ್ರಯಾಣ ಬೆಳೆಸಲಿದ್ದಾರೆ.
ಬಿಜೆಪಿ ಚಾಣಕ್ಯ ಅಮಿತ್ ಶಾ ರಾಜ್ಯ ಭೇಟಿ ನಂತರ ಬಿಜೆಪಿ ನಾಯಕರು ಫುಲ್ ಚುರುಕಾಗಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಕಾರ್ಯತಂತ್ರ ಹೆಣೆಯುತ್ತಿದೆ. ಹೆಲಿಕಾಪ್ಟರ್ ಪ್ರವಾಸದ ವೇಳೆ ಬಿಎಸ್ ವೈ ಜತೆ ಸ್ಟಾರ್ ಪ್ರಚಾರಕರೂ ಸಾಥ್ ನೀಡಲಿದ್ದಾರೆ. ಜನವರಿ ಅಂತ್ಯಕ್ಕೆ ಪರಿವರ್ತನಾ ಯಾತ್ರೆ ಮುಗಿಯಲಿದ್ದು ಬಳಿಕ ಒಂದು ವಾರ ಬಿಎಸ್ವೈ ವಿಶ್ರಾಂತಿ ತೆಗೆದುಕೊಳ್ಳಲಿದ್ದಾರೆ. ವಿಶ್ರಾಂತಿ ಬಳಿಕ ಫೆಬ್ರವರಿ 3ನೇ ವಾರದಲ್ಲಿ ಹೆಲಿಕಾಪ್ಟರ್ ಪ್ರವಾಸ ಆರಂಭಿಸುವಂತೆ ಅಮಿತ್ ಶಾ ಸೂಚಿಸಿದ್ದಾರೆ. ಚುನಾವಣಾ ಪ್ರಚಾರಕ್ಕಾಗಿ ಪಕ್ಷದ ವತಿಯಿಂದಲೇ ಬಿಎಸ್ವೈಗೆ ಹೆಲಿಕಾಪ್ಟರ್ ವ್ಯವಸ್ಥೆ ಮಾಡಲಾಗಿದೆ ಎಂದು ಸುವರ್ಣ ನ್ಯೂಸ್ಗೆ ಬಿಜೆಪಿಯ ಉನ್ನತ ಮೂಲಗಳ ಮಾಹಿತಿ ಲಭ್ಯವಾಗಿದೆ.
Comments