ವಿಧಾನಸೌಧದಲ್ಲಿ ಸಿಬ್ಬಂದಿಗೆ ಹೃದಯಾಘಾತದಿಂದ ಆಸ್ಪತ್ರೆಗೆ ಪರದಾಡಬೇಕಾದ ಪರಿಸ್ಥಿತಿ

ರಾಜ್ಯದ ಆಡಳಿತ ಶಕ್ತಿ ಕೇಂದ್ರವಾಗಿರುವ ವಿಧಾನಸೌಧದಲ್ಲೂ ಕೆಲವೊಮ್ಮೆ ಸೂಕ್ತ ಸೌಲಭ್ಯಗಳಿಲ್ಲದೆ ಪರದಾಡಬೇಕಾಗುತ್ತದೆ ಎನ್ನುವುದು ಇಂದು ಬಹಿರಂಗಗೊಂಡಿದೆ. ಸಿಬಂದಿಯೊಬ್ಬರು ಹೃದಯಾಘಾತಕ್ಕೀಡಾಗಿದ್ದು ಅವರನ್ನು ಆಸ್ಪತ್ರೆಗೆ ಸಾಗಿಸಲು ಪರದಾಡಬೇಕಾದ ಪರಿಸ್ಥಿತಿ ಬಂದೋದಗಿದ ಬಗ್ಗೆ ವರದಿಯಾಗಿದೆ.
ಸಚಿವಾಲಯದ ಸಿಬಂದಿ ಅಮ್ಜದ್ ಪಾಷಾ ಅವರು ಹೃದಯಾಘಾತಕ್ಕೀಡಾಗಿ ಕುಸಿದು ಬಿದ್ದಿದ್ದು ಅವರನ್ನು ಆಸ್ಪತ್ರೆಗೆ ಸಾಗಿಸಲು ಸ್ಟ್ರೆಚರ್ ಇರಲಿಲ್ಲ. ಅಂಬುಲೆನ್ಸ್‌ಗೆ ಕರೆ ಮಾಡಲಾಯಿತಾದರೂ ಬರುವಲ್ಲಿ ವಿಳಂಬವಾಯಿತು. ಕೊನೆಗೆ ಸಚಿವಾಲಯದಲ್ಲಿದ್ದ ಕುರ್ಚಿಯಲ್ಲೇ ಅವರನ್ನು ಹೊರಗೆ ಕರೆ ತರಲಾಯಿತು. ಕೆಲ ಹೊತ್ತಿನ ಆತಂಕದ ಬಳಿಕ ಪಾಷಾ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ,ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.
Comments