ಮಾಜಿ ಪ್ರಧಾನಿ ದೇವೇಗೌಡರ ಹುಟ್ಟಿನಿಂದ ಹಾಸನಕ್ಕೆ ಖ್ಯಾತಿ ಬಂದಿಲ್ಲ : ಕೆ.ಪಿ ನಂಜುಂಡಿ

ಮಾಜಿ ಪ್ರಧಾನಿ ದೇವೇಗೌಡ ಅವರ ಹುಟ್ಟಿನಿಂದ ಹಾಸನಕ್ಕೆ ಖ್ಯಾತಿ ಬಂದಿಲ್ಲವೆಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಕೆ.ಪಿ ನಂಜುಂಡಿ ಹೇಳಿದ್ದಾರೆ. ತುಮಕೂರಿನಲ್ಲಿ ನಡೆದ 5ನೇ ವರ್ಷದ ರಾಜ್ಯ ಮಟ್ಟದ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಹಾಸನ ಖ್ಯಾತಿ ಹೊಂದಿರುವುದು ಬೇಲೂರು, ಹಳೆಬೀಡಿನ ಶಿಲ್ಪಕಲೆಯಿಂದ. ಅಮರ ಶಿಲ್ಪಿ ಜಕಣಚಾರಿ ಕೈ ಚಳಕದಿಂದ ಎಂದರು.
ಅಲ್ಲದೆ ರಾಜ್ಯದ ಯಾವುದಾದ್ರೂ ವಿವಿಗೆ ಜಕಣಾಚಾರಿ ಹೆಸರಿಡಬೇಕು ಹಾಗೂ ಬೇಲೂರಿನ ಚನ್ನಕೇಶವ ದೇವಸ್ಥಾನದ ಆವರಣದಲ್ಲಿ ಜಕಣಾಚಾರಿ ಪ್ರತಿಮೆ ಸ್ಥಾಪಿಸಲು ಜಾಗ ನೀಡಬೇಕೆಂದು ನಂಜುಂಡಿ ಒತ್ತಾಯಿಸಿದ್ರು. ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ವಿ. ಸೋಮಣ್ಣ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ರು.
Comments