ತಮಿಳುನಾಡಿನಲ್ಲಿ ರಜಿನಿಕಾಂತ್ ಕಮಲ ಅರಳಿಸುತ್ತಾರಾ ?
ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜಿನಿಕಾಂತ್ ರಾಜಕೀಯಕ್ಕೆ ಪ್ರವೇಶಿಸುವುದಾಗಿ ಭಾನುವರವಷ್ಟೆ ಘೋಷಿಸಿದ್ದು, ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ತಮಿಳು ನಾಡಿನ ಮೇಲೆ ಕಣ್ಣಿಟ್ಟಿರುವ ಕಮಲ ಪಾಳಯ ಈ ಅವಕಾಶವನ್ನು ಉಪಯೋಗಿಸಿಕೊಳ್ಳಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಮರಣದ ನಂತರ ತಮಿಳುನಾಡಿನಲ್ಲಿ ನೆಲೆ ಕಂಡುಕೊಳ್ಳಲು ಒದ್ದಾಡುತ್ತಿದ್ದ ಬಿಜೆಪಿಗೆ ಈಗ ದಾರಿಯೊಂದು ಕಂಡಂತಾಗಿದೆ. ರಜಿನಿಕಾಂತ್ ಹಾಗೂ ಪ್ರಧಾನಿ ಮೋದಿ ಉತ್ತಮ ಸಂಬಂಧ ಹೊಂದಿದ್ದಾರೆ. ಕಳೆದ ತಿಂಗಳು ತಮಿಳು ನಾಡಿಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ರಜಿನಿಕಾಂತ್ ಅವರನ್ನು ಭೇಟಿ ಕೂಡ ಮಾಡಿದ್ದರು.
ಈಗಾಗಲೇ ಹಲವು ಬಿಜೆಪಿ ನಾಯಕರು ತಲೈವಾನೊಂದಿಗೆ ಕೈ ಜೋಡಿಸುವ ಸೂಚನೆಯನ್ನು ಪರೋಕ್ಷವಾಗಿ ನೀಡತೊಡಗಿದ್ದಾರೆ. ಕೆಲವು ತಿಂಗಳ ಹಿಂದೆ ಈ ಕುರಿತು ಮಾತನಾಡಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ, ರಜಿನಿಕಾಂತ್ ಅವರೊಂದಿಗೆ ಕೈ ಜೋಡಿಸುವ ಅವಕಾಶ ಸಿಕ್ಕರೆ ಬಿಜೆಪಿ ಅತ್ಯಂತ ಸಂತಸದಿಂದ ಒಪ್ಪಿಕೊಳ್ಳುತ್ತದೆ ಎಂದು ಕೂಡ ಹೇಳಿದ್ದರು. 2021ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎಲ್ಲ 234 ಸ್ಥಾನಗಳಿಗೆ ತಮ್ಮ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ ಎಂದು ರಜಿನಿಕಾಂತ್ ಹೇಳಿದ್ದಾರೆ.
Comments