ಹೊಸ ವರ್ಷಕ್ಕೆ ರೈತರಿಗೆ ಸಿಹಿ ಸುದ್ದಿ ನೀಡಿದ ತೆಲಂಗಾಣ ಸರ್ಕಾರ

ಹೊಸ ವರ್ಷದ ಸಂದರ್ಭದಲ್ಲೇ ತೆಲಂಗಾಣ ಸರ್ಕಾರ ರೈತರಿಗೆ ಸಿಹಿ ಸುದ್ದಿ ನೀಡಿದೆ. ಹೊಸ ವರ್ಷದ ಉಡುಗೊರೆಯಾಗಿ ರೈತರಿಗೆ 24 X 7 ಉಚಿತವಾಗಿ ವಿದ್ಯುತ್ ನೀಡುವುದಾಗಿ ಘೋಷಿಸಲಾಗಿದೆ. ಮುಖ್ಯಮಂತ್ರಿ ಕೆ. ಚಂದ್ರಶೇಖರರಾವ್ ಈ ಕುರಿತು ಮಾಹಿತಿ ನೀಡಿದ್ದು, ದಿನವಿಡೀ ಗುಣಮಟ್ಟದ ವಿದ್ಯುತ್ ಅನ್ನು ಕೃಷಿ ಉದ್ದೇಶಕ್ಕಾಗಿ ರಾಜ್ಯದ ರೈತರಿಗೆ ಪೂರೈಸಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.
ಅನೇಕ ರಾಜ್ಯಗಳಲ್ಲಿ ನಿರಂತರವಾಗಿ ಈಗಾಗಲೇ ಕೃಷಿ ಚಟುವಟಿಕೆಗಳಿಗೆ ವಿದ್ಯುತ್ ಸರಬರಾಜು ಮಾಡಲಾಗ್ತಿದೆ. ಆದರೆ, ನಿರಂತರವಾಗಿ ಉಚಿತವಾಗಿ ವಿದ್ಯುತ್ ಪೂರೈಕೆ ಮಾಡುತ್ತಿರುವುದು ತೆಲಂಗಾಣ ಸರ್ಕಾರವಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಕೃಷಿ ಉದ್ದೇಶಕ್ಕಾಗಿ ರೈತರಿಗೆ ದಿನದ 24 ಗಂಟೆಯೂ ಗುಣಮಟ್ಟದ ವಿದ್ಯುತ್ ಅನ್ನು ಉಚಿತವಾಗಿ ಸರಬರಾಜು ಮಾಡಲಾಗುವುದು ಎಂದು ತಿಳಿಸಿದ್ದಾರೆ.
Comments