ಬಿಗ್ ಬಾಸ್ ಸೀಕ್ರೆಟ್ ರೂಂನಲ್ಲಿ ವೈನ್ ಕೇಳಿದ ದಿವಾಕರ್
ಈ ವಾರ ಕ್ಯಾಪ್ಟನ್ ಆಗಿ ಸಮೀರಾಚಾರ್ಯ ಆಯ್ಕೆಯಾಗಿದ್ದು, ಸೀಕ್ರೆಟ್ ರೂಂನಲ್ಲಿರುವ ದಿವಾಕರ್ ವೈನ್ ಕೇಳಿದ್ದಾರೆ. 'ಬಿಗ್ ಬಾಸ್' ನಲ್ಲಿ ಸದಸ್ಯರಿಗೆ ಕ್ಯಾಪ್ಟನ್ ಆಯ್ಕೆಗಾಗಿ ನೀಡಲಾಗಿದ್ದ ಚಟುವಟಿಕೆಯಲ್ಲಿ ಕೊನೆಯವರೆಗೂ ಉಳಿದ ಸಮೀರಾಚಾರ್ಯ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ.
ಇದರಲ್ಲಿ ಬೀಗದ ಕೈಗಳನ್ನು ಕೈಯಲ್ಲಿಡಿದು ಅಲ್ಲಾಡದಂತೆ ಹಿಡಿದುಕೊಳ್ಳಬೇಕಿತ್ತು. ಸದಸ್ಯರೆಲ್ಲಾ ಕೈ ಬಿಟ್ಟ ಬಳಿಕ ಕೊನೆಯವರೆಗೂ ಕೃಷಿ, ಅನುಪಮಾ ಹಾಗೂ ಸಮೀರಾಚಾರ್ಯ ಉಳಿದುಕೊಂಡಿದ್ದು, ಅವರಲ್ಲಿ ಸಮೀರಾಚಾರ್ಯ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಸೀಕ್ರೆಟ್ ರೂಂನಲ್ಲಿ ದಿವಾಕರ್ ಮಾತನಾಡುತ್ತಾ, ಚಂದನ್ ಶೆಟ್ಟಿ ಒಳ್ಳೆಯ ಸ್ನೇಹಿತನಾಗಿದ್ದರು. ಎಲ್ಲರೂ ಒಳ್ಳೆಯವರು. ಜಯಶ್ರೀನಿವಾಸನ್ ಕೂಡ ಒಳ್ಳೆಯವರು. ಅವರು ನೋವಾದಾಗ ಮಾತ್ರ ನನಗೆ ಮಾತನಾಡಿದ್ದರು. ಅವರು ತುಂಬಾ ಒಳ್ಳೆಯವರು ಎಂದು ಹೇಳಿದ್ದಾರೆ. ಮನೆಯೊಳಗೆ ಕಾರ್ತಿಕ್, ಕೃಷಿ, ಅನುಪಮಾ ಅವರು ತನ್ನ ಬಗ್ಗೆ ಮಾತನಾಡಿಕೊಂಡಿದ್ದನ್ನು ದಿವಾಕರ್ ಕೇಳಿಸಿಕೊಂಡಿದ್ದಾರೆ.
ಸೀಕ್ರೆಟ್ ರೂಂನಲ್ಲಿ ದಿವಾಕರ್, ಯಾರಿಗೂ ಹೇಳಲ್ಲ 'ಬಿಗ್ ಬಾಸ್,' ಚಿಕ್ಕ ಬಾಟಲ್ ವೈನ್ ಕೊಡಿ. ನೀವು ಲೈಟ್ ಆಫ್ ಮಾಡಿದಾಗ ಕೊಡಿ. ಹ್ಯಾಪಿ ನ್ಯೂ ಇಯರ್ ಒಬ್ಬನೇ ಸೆಲೆಬ್ರೇಷನ್ ಮಾಡ್ತೀನಿ. ಊಟ ಮಾಡಿ ಮಲಗುತ್ತೇನೆ. ಯಾರಿಗೂ ಹೇಳಲ್ಲ ಎಂದು ಹೇಳಿದ್ದಾರೆ. 'ಬಿಗ್ ಬಾಸ್' ಹೊಸ ವರ್ಷದ ಪ್ರಯುಕ್ತ ಸದಸ್ಯರಿಗೆ ಔತಣ ನೀಡಿದ್ದಾರೆ. ಸದಸ್ಯರೆಲ್ಲಾ ಕೇಕ್ ಕತ್ತರಿಸಿ ಹಾಡಿ ಕುಣಿದು ಸಂಭ್ರಮಿಸಿದ್ದಾರೆ. ಸಂಭ್ರಮದ ನಡುವೆಯೂ ಶ್ರುತಿ ಮನೆಯವರನ್ನು ನೆನಪಿಸಿಕೊಂಡು ಭಾವುಕರಾಗಿ ಅತ್ತಿದ್ದಾರೆ. ಇಡೀ ಮನೆಯಲ್ಲಿ ಹೊಸ ವರ್ಷಾಚರಣೆಯ ಸಂಭ್ರಮ ಜೋರಾಗಿತ್ತು.
Comments