ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಮಾಜಿ ಸೆನೆಟ್ ಸದಸ್ಯ ಜೆಡಿಎಸ್ ನಿಂದ ಕಣಕ್ಕೆ..!!

ಮೈಸೂರು ವಿವಿ ಮಾಜಿ ಸೆನೆಟ್ ಸದಸ್ಯ ಪಿ.ಜಗದೀಶ್ ಅವರಿಗೆ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಲು ಜೆಡಿಎಸ್ ಪಕ್ಷದಿಂದ ಟಿಕೆಟ್ ನೀಡಬೇಕೆಂದು ಮೈಸೂರು ವಿವಿಯ ಹಿರಿಯ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಕೌಶಲ್ಯಾಭಿವೃದ್ಧಿ ಸಂಘ ಒತ್ತಾಯಿಸಿದೆ.
ಮೈಸೂರಿನ ದರ್ಭಾರ್ ಹೋಟೆಲ್ ನಲ್ಲಿ ಮೈಸೂರು ವಿವಿಯ ಹಿರಿಯ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಕೌಶಲ್ಯಾಭಿವೃದ್ಧಿ ಸಂಘದ ಅಧ್ಯಕ್ಷ ಪ್ರಭು ಸಂತೇಭಾಚಹಳ್ಳಿ ಅಧ್ಯಕ್ಷತೆಯಲ್ಲಿ ಸಭೆಯಲ್ಲಿ ನಡೆಯಿತು. ಜೆಡಿಎಸ್ ವಕ್ತಾರ ದೂರ ಮಂಜುನಾಥ್ ಅವರು, ಜಗದೀಶ್ ಅವರು ಸ್ಪರ್ಧಿಸಲು ಪಕ್ಷ ಅವಕಾಶ ನೀಡಬೇಕೆಂದು ನಿರ್ಣಯಕ್ಕೆ ಸದಸ್ಯರು ಒಕ್ಕೊರಲಿನಿಂದ ಒಪ್ಪಿಗೆ ಸೂಚಿಸಿದ್ದಾರೆ. ಜಗದೀಶ್ ಅವರು ಕಾವೇರಿ ವಿದ್ಯಾರ್ಥಿ ಕ್ರಿಯಾ ಸಮಿತಿ, ಯುವರಾಜ, ಮಹಾರಾಜ ಕಾಲೇಜು ಹಾಗೂ ವಿದ್ಯಾರ್ಥಿ ನಿಲಯ ಸಂಘದಲ್ಲಿ ಎಲೆ ಮರೆಯ ಕಾಯಂತೆ ಕಾರ್ಯ ನಿರ್ವಹಿಸಿದ್ದು ಸಾಮಾಜಿಕ, ಶೈಕ್ಷಣಿಕೆ ಹೋರಾಟಗಳಲ್ಲಿ ಸಕ್ರಿಯಾರಾಗಿದ್ದಾರೆ.
Comments