ಮಹದಾಯಿ ಹೋರಟಕ್ಕಾಗಿ ಮತ್ತೆ ಪ್ರಧಾನಿ ಅವರನ್ನ ಭೇಟಿ ಮಾಡಲು ಸಿದ್ಧ : ಎಚ್ ಡಿಡಿ

ರಾಜ್ಯದ ನಾಯಕರ ಜೊತೆ ಪರಸ್ಪರ ದೋಷಾರೋಪದಿಂದ ಮಹದಾಯಿ ಏನಾಯಿತು. ನದಿಗೆ ಕಟ್ಟಿರುವ ತಡೆಗೋಡೆಯ ರಕ್ಷಣೆ ಜವಾಬ್ದಾರಿ ಕರ್ನಾಟಕ ಸರ್ಕಾರದ್ದು ಅದು ಈಗಲೂ ಹಾಗೆ ಮುಂದುವರೆಯುತ್ತೆ ಎಂದು ಭಾವಿಸಿದ್ದೇನೆ. ಅವಶ್ಯಕತೆ ಇದ್ದರೆ ಮಹದಾಯಿ ಹೋರಟಕ್ಕಾಗಿ ನಾನು ಮತ್ತೆ ಪ್ರಧಾನಿ ಅವರನ್ನ ಭೇಟಿ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.
ಆದರೆ ಈ ವೇಳೆ ತನಗೆ ಫೋಟೋ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಇದರಲ್ಲಿ ರಾಜಕೀಯ ಇಲ್ಲ ಎಂದು ಸ್ಪಷ್ಟಪಡಿಸಿದರು. ಕಾವೇರಿ ಹೋರಾಟಕ್ಕೆ ಸಿಎಂ ಸಿದ್ದರಾಮಯ್ಯ ಕರೆದಿದ್ದಕ್ಕೆ ನಾನು ಹೋಗಿರಲಿಲ್ಲವೇ. ಈಗಲೂ ಅಷ್ಟೇ, ನಾನು ಪಕ್ಷ ಬಿಟ್ಟು ಹೋರಾಟಕ್ಕೆ ಸಿದ್ಧನಿದ್ದೇನೆ, ಪ್ರಧಾನಿ ಭೇಟಿ ಮಾಡಲೂ ಕೂಡ ಸಿದ್ಧನಿದ್ದೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
Comments