ಸಿಎಂ ಸಿದ್ದರಾಮಯ್ಯ ನವರ ಯಾತ್ರೆಯ ಬಗ್ಗೆ ದೇವೇಗೌಡ್ರು ಏನಂದ್ರು?
ಬೆಂಗಳೂರಿನ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದರು. ಅಯ್ಯೋ ಯಾವ ಮುಖ್ಯಮಂತ್ರಿಯೂ ಇವರ ರೀತಿ ಮಾಡಿಲ್ಲ. ಏನ್ ಕಿರೀಟ, ಕತ್ತಿ, ಗುರಾಣಿ ಹಿಡಿದುಕೊಳ್ಳುತ್ತಿದ್ದಾರೆ. ಇವರೊಬ್ಬರೇ ನವ ಕರ್ನಾಟಕ ನಿರ್ಮಾಣ ಮಾಡುವವರು. ಇಷ್ಟು ದಿನ ಎಲ್ಲಿ ಹೋಗಿದ್ದರು ಎಂದು ವ್ಯಂಗ್ಯವಾಡಿದ್ದಾರೆ.
ಸಿದ್ದರಾಮಯ್ಯ ಅವರು ಅಭಿವೃದ್ಧಿ ಮಾಡಿದ್ದೇನೆ ಎಂದು ಹೇಳುವ ಭರದಲ್ಲಿ, ಹಿಂದಿನವರು ಸಾಧನೆ ಮಾಡಿಲ್ಲ ಎಂದು ಜರಿದಿದ್ದಾರೆ. ಈ ವೇಳೆ ನನ್ನ ಹೆಸರನ್ನೂ ಪ್ರಸ್ತಾಪಿಸಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ಹಣಕಾಸು ಸಚಿವರಾಗಿ ಎಷ್ಟು ಕೆಲಸ ಮಾಡಿದ್ದಾರೆ ಎನ್ನುವುದು ಗೊತ್ತಿದೆ. ಸರ್ಕಾರಿ ಹಣದಿಂದ ದುಂದುವೆಚ್ಚ ಮಾಡಿ ಪ್ರವಾಸ ಮಾಡುತ್ತಾರೆ. ನವ ಕರ್ನಾಟಕ ನಿರ್ಮಾಣ ಮಾಡುವುದಕ್ಕೆ ಇವರೊಬ್ಬರೇ ಹುಟ್ಟಿದ್ದು, ಎಲ್ಲವು ಜನರಿಗೆ ಗೊತ್ತಾಗುತ್ತದೆ. ಬಿರುಸಿನ ಮಾತು ಸ್ವಲ್ಪ ಕಡಿಮೆ ಮಾಡಬೇಕು, ಇಲ್ಲವಾದರೆ ಅದಕ್ಕೆ ಪ್ರತಿಯಾಗಿ ಬಿರುಸಿನ ಪ್ರತಿಕ್ರಿಯೆ ಕೊಡುವ ಶಕ್ತಿ ನಮಗೂ ಇದೆ ಎಂದರು.
Comments