ಸಾಹಸ ಸಿಂಹ ಡಾ.ವಿಷ್ಣುವರ್ಧನ್ರವರ ಎಂಟನೆ ಪುಣ್ಯತಿಥಿ
ಸಾಹಸ ಸಿಂಹ ಡಾ.ವಿಷ್ಣುವರ್ಧನ್ರವರ ಎಂಟನೆ ಪುಣ್ಯತಿಥಿಯನ್ನು ಕರ್ನಾಟಕ ರಾಜ್ಯ ಡಾ.ವಿಷ್ಣುವರ್ಧನ್ರವರ ಆದರ್ಶ ಬಳಗದಿಂದ ತುರುವನೂರು ರಸ್ತೆಯಲ್ಲಿರುವ ಉದ್ಯಾನವನದಲ್ಲಿ ಆಚರಿಸಲಾಯಿತು.
ತುರುವನೂರು ರಸ್ತೆಯಲ್ಲಿರುವ ಡಾ.ವಿಷ್ಣುವರ್ಧನ್ರವರ ಉದ್ಯಾನವನದಲ್ಲಿ ವಿಷ್ಣುರವರ ಪುಣ್ಯತಿಥಿ ಆಚರಿಸಿ ಮಾತನಾಡಿದ ಕರ್ನಾಟಕ ರಾಜ್ಯ ಡಾ.ವಿಷ್ಣುವರ್ಧನ್ರವರ ಆದರ್ಶ ಬಳಗದ ರಾಜ್ಯಾಧ್ಯಕ್ಷ ಸಿ.ಕೆ.ಗೌಸ್ಪೀರ್ ನಾಗರಹಾವು ಚಿತ್ರದ ಮೂಲಕ ಚಿತ್ರದುರ್ಗದ ಕೋಟೆಯನ್ನು ನಾಡಿಗೆ ಪರಿಚಯಿಸಿದ ಡಾ.ವಿಷ್ಣುವರ್ಧನ್ರವರು ಅಮೋಘ ಅಭಿನಯದ ಮೂಲಕ ಅಪಾರ ಅಭಿಮಾನಿಗಳ ಮನದಲ್ಲಿ ಇನ್ನು ಉಳಿದಿದ್ದಾರೆ ಕನ್ನಡ ನಾಡು, ನುಡಿ, ನೆಲ, ಜಲಕ್ಕೆ ಅವರು ನೀಡಿರುವ ಕೊಡುಗೆಯನ್ನು ಯಾರು ಮರೆಯುವಂತಿಲ್ಲ ಎಂದು ಸ್ಮರಿಸಿದರು.
Comments