ಡಿಸೆಂಬರ್ ತಿಂಗಳು ರಶ್ಮಿಕಾ ಲೈಫ್‌ನಲ್ಲಿ ಖುಷಿಯ ಚಮಕ್ ತಂದಿದೆ

ಡಿಸೆಂಬರ್ ತಿಂಗಳು ನಟಿ ರಶ್ಮಿಕಾ ಮಂದಣ್ಣ ಪಾಲಿಗೆ ಅದೆಷ್ಟು ಹ್ಯಾಪಿ ಸಮಯ ಎನ್ನುವುದನ್ನು ಈ ಮೊದಲು ತಿಳಿಸಿದ್ದೆವು. ಈ ಸಂತಸದ ಕಿರೀಟಕ್ಕೆ ಮತ್ತೊಂದು ಸೇರ್ಪಡೆಯಾಗಿದೆ. ಅಂದ್ರೆ ರಶ್ಮಿಕಾ ಮಂದಣ್ಣ ಈ ಡಿಸೆಂಬರ್‌ನ್ನು ಮತ್ತಷ್ಟು ಖುಷಿಯಾಗಿಸಿಕೊಂಡಿದ್ದಾರೆ. ಹೌದು, ರಶ್ಮಿಕಾ ತಮ್ಮ ಮೊದಲ ಕಾರು ಖರೀದಿಸಿದ್ದಾರೆ.
ಎರಡೆರಡು ಸೂಪರ್ ಸಿನಿಮಾಗಳ ಬಿಡುಗಡೆ, ಬೇರೆ ಭಾಷೆಗಳ ಚಿತ್ರಗಳಲ್ಲಿ ಅವಕಾಶ ಹೀಗೆ ರಶ್ಮಿಕಾ ಪಾಲಿಗೆ ಇದು ಸಂಭ್ರಮದ ಸಮಯ. ಕೆಂಪು ಬಣ್ಣದ ಈ ಕಾರನ್ನು ತಮ್ಮ ಭಾವಿ ಪತಿ ರಕ್ಷಿತ್ ಶೆಟ್ಟಿ ಜೊತೆ ತೆರಳಿ ಡೆಲಿವರಿ ಪಡೆದಿದ್ದಾರೆ. ಬಳಿಕ ಹೊಸ ಕಾರಿನ ಮೊದಲ ಡ್ರೈವ್ ಅನ್ನು ಈ ಕ್ಯೂಟ್ ಜೋಡಿ ಎಂಜಾಯ್ ಮಾಡಿದ್ದಾರೆ. ಈ ಸಂತಸವನ್ನು ರಕ್ಷಿತ್ ಹಂಚಿಕೊಂಡಿದ್ದಾರೆ. ಒಟ್ಟಿನಲ್ಲಿ ಡಿಸೆಂಬರ್ ತಿಂಗಳು ರಶ್ಮಿಕಾ ಲೈಫ್‌ನಲ್ಲಿ ಖುಷಿಯ ಚಮಕ್ ತಂದಿರೋದಂತೂ ಸತ್ಯ.
Comments