ಶಾಸಕಿ ಆಶಾ ಕುಮಾರಿ ಹಾಗೂ ಪೊಲೀಸರ ನಡುವೆ ಪರಸ್ಪರ ಕಪಾಳ ಮೋಕ್ಷ
ಹಿಮಾಚಲ ಪ್ರದೇಶ ಪೊಲೀಸ್ ಪೇದೆ ಮತ್ತು ಸ್ಥಳೀಯ ಶಾಸಕಿ ಆಶಾ ಕುಮಾರಿ ನಡುವಿನ ಪರಸ್ಪರ ಕಪಾಳ ಮೋಕ್ಷ ಪ್ರಕರಣ ತಾರಕಕ್ಕೇರಿದ್ದು, ಇಬ್ಬರೂ ಪರಸ್ಪರರ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಶಿಮ್ಲಾ ಪೊಲೀಸರು ಇಬ್ಬರ ವಿರುದ್ಧವೂ ದೂರು ದಾಖಲಿಸಿಕೊಂಡಿದ್ದು, ಶಾಸಕಿ ಆಶಾ ಕುಮಾರಿ ಹಾಗೂ ಮಹಿಳಾ ಪೊಲೀಸ್ ಪೇದೆ ವಿರುದ್ಧ ಎಫ್ ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಆಯೋಜಿಸಿದ್ದ ಸಭೆಯೊಂದರಲ್ಲಿ ಪಾಲ್ಗೊಳ್ಳಲು ತೆರಳಿದ್ದ ಸಂದರ್ಭ ಆಶಾ ಅನುಚಿತವಾಗಿ ವರ್ತಿಸಿದ್ದಾರೆ. ಪಂಜಾಬ್ ಕಾಂಗ್ರೆಸ್‌ನ ಇನ್ ಚಾರ್ಜ್ ವಹಿಸಿಕೊಂಡಿರುವ ಆಶಾ ಕುಮಾರಿ ಇತ್ತೀಚೆಗೆ ನಡೆದ ಹಿಮಾಚಲ ಪ್ರದೇಶದ ಚುನಾವಣೆಯಲ್ಲಿ ಡಾಲ್‌ಹೌಸಿ ಕ್ಷೇತ್ರದಿಂದ ಜಯಿಸಿದ್ದರು. ಹಿಮಾಚಲದ 68 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಕೇವಲ 21 ಸ್ಥಾನಗಳನ್ನು ಪಡೆಯಲು
Comments