ಬಿ.ಜೆ.ಪಿ. ಸಂಸದರಿಗೆ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕ್ಲಾಸ್

ತಾವು ಕಳುಹಿಸಿದ ಗುಡ್ ಮಾರ್ನಿಂಗ್ ಮೆಸೇಜ್ ಸೇರಿದಂತೆ ಹಲವು ಸಂದೇಶಗಳನ್ನು ಬಹಳಷ್ಟು ಸಂಸದರು ಗಮನಿಸುತ್ತಿಲ್ಲವೆಂಬುದನ್ನು ಸಭೆಯಲ್ಲಿ ಪ್ರಸ್ತಾಪಿಸಿದ ನರೇಂದ್ರ ಮೋದಿಯವರು, ಕೇಂದ್ರ ಸರ್ಕಾರದ ಸಾಧನೆಗಳ ಮಾಹಿತಿ ನೀಡುತ್ತಿರುವ ನರೇಂದ್ರ ಮೋದಿ ಆಯಪ್ ಬಳಸಿಕೊಳ್ಳಲು ಸೂಚಿಸಿದರೆಂದು ತಿಳಿದು ಬಂದಿದೆ.
ಜೂನ್ 17, 2015 ರಂದು ನರೇಂದ್ರ ಮೋದಿ ಆಯಪ್ ಬಿಡುಗಡೆ ಮಾಡಲಾಗಿದ್ದು, ಕೆಲ ಬಿ.ಜೆ.ಪಿ ಸಂಸದರು ಇದನ್ನು ಡೌನ್ ಲೋಡ್ ಮಾಡಿಕೊಂಡು ಫಾಲೋ ಮಾಡುವ ಗೋಜಿಗೆ ಹೋಗಿಲ್ಲವೆನ್ನಲಾಗಿದೆ. ಈ ಹಿಂದೆಯೂ ಕೆಲ ಬಿಜೆಪಿ ಸಂಸದರ ವರ್ತನೆ ಕುರಿತು ಮೋದಿಯವರು ಕ್ಲಾಸ್ ತೆಗೆದುಕೊಂಡಿದ್ದು, ಸಂಸತ್ ಕಲಾಪಕ್ಕೆ ಸಕ್ರಿಯವಾಗಿ ಹಾಜರಾಗದಿದ್ದರೆ ಮುಂಬರುವ ಚುನಾವಣೆಯಲ್ಲಿ ಟಿಕೇಟ್ ನೀಡಲಾಗುವುದಿಲ್ಲವೆಂದು ಎಚ್ಚರಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
Comments