ಪ್ರಮಾಣವಚನ ಸಮಾರಂಭದಲ್ಲಿ ಯಡವಟ್ಟು ಮಾಡಿಕೊಂಡ ಸಚಿವ

ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರ ಸಂಪುಟಕ್ಕೆ ನೂತನ ಸಚಿವರಾಗಿ ನೇಮಕಗೊಂಡ ಅವರ ಸಹೋದರ ತಸ್ದಖ್ ಮುಫ್ತಿ ಪ್ರಮಾಣವಚನ ಸಮಾರಂಭದಲ್ಲಿ ಯಡವಟ್ಟು ಮಾಡಿಕೊಂಡು ಗೇಲಿಗೊಳಗಾಗಿದ್ದಾರೆ.
ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಮುಂದಾಗಿದ್ದ ಅವರು IN THE NAME OF 'GOD' ಎನ್ನುವ ಬದಲಿಗೆ ಬಾಯ್ತಪ್ಪಿ IN THE NAME OF 'DOG' ಎಂದಿದ್ದಾರೆ. ಕೂಡಲೇ ತಸ್ದಖ್ ಮುಫ್ತಿ ತಮ್ಮ ತಪ್ಪು ತಿದ್ದಿಕೊಂಡರಾದರೂ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಗೇಲಿ ಮಾಡುವುದು ನಿಂತಿಲ್ಲ. ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮುಫ್ತಿ ಮಹಮ್ಮದ್ ಸಹೀದ್ ನಿಧನದ ಬಳಿಕ ಅವರ ಪುತ್ರಿ ಮೆಹಬೂಬಾ ಮುಫ್ತಿ ಮುಖ್ಯಮಂತ್ರಿಯಾಗಿದ್ದು, ಈಗ ಮೆಹಬೂಬಾರ ಸಹೋದರ ಕೂಡಾ ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡಿರುವುದು ಟೀಕೆಗೆ ಗುರಿಯಾಗಿದೆ. ಸಚಿವ ಸ್ಥಾನವನ್ನು ಗಿಫ್ಟ್ ಆಗಿ ನೀಡಿದ ಮೆಹಬೂಬಾ ನಿರ್ಧಾರದಿಂದ ಜಮ್ಮು ಕಾಶ್ಮೀರವನ್ನು ಆ ದೇವರೇ ಕಾಪಾಡಬೇಕು ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.
Comments