ತುಮಕೂರು ಜಿಲ್ಲೆಯ ಪ್ರಗತಿಗೆ ರಾಜ್ಯ ಕಾಂಗ್ರೆಸ್ ಸರಕಾರದ ಕೊಡುಗೆ
ತುಮಕೂರು ಜಿಲ್ಲೆಯ ಪ್ರಗತಿಯಲ್ಲಿ ರಾಜ್ಯ ಕಾಂಗ್ರೆಸ್ ಸರಕಾರದ ಕೊಡುಗೆ ಅಲ್ಲಗಳೆಯುವಂತೆಯೇ ಇಲ್ಲ. ಜಿಲ್ಲೆಗಾಗಿ ಕೈಗೊಂಡ ಪ್ರಗತಿಗೆ ಪೂರಕವಾದ ಕಾರ್ಯಕ್ರಮಗಳ ಪಟ್ಟಿ ಇಂತಿವೆ. ಶಿರಾ ತಾಲೂಕಿನ ಕಳ್ಳಂಬೆಳ್ಳ ಕೆರೆಯಿಂದ ಹೇಮಾವತಿ ನೀರನ್ನು ಮದಲೂರು ಕೆರೆಗೆ ಹರಿಸುವ 32 ಕಿ.ಮೀ. ಉದ್ದದ ನಾಲೆಯನ್ನು 59.85 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದರಿಂದ ನಾಲೆಯುದ್ದಕ್ಕೂ ಸಿಗುವ 11 ಕೆರೆಗಳಿಗೆ ನೀರು ಲಭ್ಯವಾಗಿದೆ.
ಜಿಲ್ಲೆಯಲ್ಲಿರುವ ವಸಂತನರಸಾಪುರ ಕೈಗಾರಿಕಾ ಪ್ರದೇಶ 1 ರಿಂದ 6 ನೇ ಹಂತದವರೆಗೆ ಇರುವ ಪ್ರದೇಶವನ್ನು ಕೇಂದ್ರ ಸರಕಾರದಿಂದ ರಾಷ್ಟ್ರೀಯ ಹೂಡಿಕೆ ಮತ್ತು ತಯಾರಿಕಾ ವಲಯ ಎಂದು ಗುರುತಿಸಲಾಗಿದೆ. ಈ ಕೈಗಾರಿಕಾ ಪ್ರದೇಶದಲ್ಲಿ 1614 ಕೋಟಿ ಬಂಡವಾಳ ಹೂಡಿಕೆಯಾಗಿದ್ದು, ಇಲ್ಲಿನ ಫುಡ್ ಪಾರ್ಕ್ ದೇಶದ ಗಮನ ಸೆಳೆದಿದೆ. ತುಮಕೂರು ಜಿಲ್ಲೆಯ ಬರ ಪ್ರದೇಶವಾದ ಪಾವಗಡ ತಾಲೂಕಿನಲ್ಲಿ ವಿಶ್ವದ ಅತಿದೊಡ್ಡ 2000 ಮೆಗಾವ್ಯಾಟ್ ಸಾಮರ್ಥ್ಯದ ಸೌರಪಾರ್ಕ್ ಅನ್ನು ಸುಮಾರು 13,000 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿದೆ. 2000 ರೈತರು ಪ್ರತಿ ವರ್ಷ 25 ಕೋಟಿ ರುಪಾಯಿಗಳಷ್ಟು ಗುತ್ತಿಗೆ ಹಣವನ್ನು ಪಡೆಯಲಿದ್ದಾರೆ.
ಕೊರಟಗೆರೆ ತಾಲೂಕಿನ ತುಂಬಗಾನಹಳ್ಳಿ ಬಳಿ 42 ಎಕರೆ ಪ್ರದೇಶದಲ್ಲಿ ಕೆಎಸ್ ಆರ್ ಪಿ ತರಬೇತಿ ಶಾಲೆ ನಿರ್ಮಾಣ ಕಾರ್ಯ ಸಾಗುತ್ತಿದೆ. ಜಿಲ್ಲೆಯಲ್ಲಿ 425 ಪೊಲೀಸ್ ಕಾನ್ ಸ್ಟೇಬಲ್ ಹಾಗೂ 80 ಮಹಿಳಾ ಪೊಲೀಸ್ ಕಾನ್ ಸ್ಟೇಬಲ್ ಗಳ ನೇಮಕಕ್ಕೆ ಹಾಗೂ ಪೊಲೀಸ್ ಠಾಣೆಗಳಿಗೆ ಮೂಲ ಸೌಕರ್ಯ ಕಲ್ಪಿಸಲಾಗಿದೆ.ಕರ್ನಾಟಕ ರಾಜ್ಯ ಸರಕಾರವು ಈ ಯೋಜನೆಗೆ ಇದುವರೆಗೆ 68.98 ಕೋಟಿ ರುಪಾಯಿಗಳನ್ನು ಭೂಸ್ವಾಧೀನ ವೆಚ್ಚಕ್ಕಾಗಿ ಬಿಡುಗಡೆ ಮಾಡಿದೆ. ತುಮಕೂರು ಜಿಲ್ಲೆಯಲ್ಲಿ ಈ ರೈಲ್ವೆ ಯೋಜನೆಯ ಉದ್ದ 58.69 ಕಿ.ಮೀ. ತುಮಕೂರು-ದಾವಣಗೆರೆ ರೈಲ್ವೆ ಯೋಜನೆಯ ಒಟ್ಟು ವೆಚ್ಚ ಅಂದಾಜು 1800 ಕೋಟಿ ರುಪಾಯಿ.ಮೂರ್ನಾಲ್ಕು ವರ್ಷಗಳಿಂದ ಬರದಿಂದಾಗಿ ಜಿಲ್ಲೆಯ ರೈತರು ಸಂಕಷ್ಟದಲ್ಲಿದ್ದರು. ಸರಕಾರದ ಸಾಲ ಮನ್ನಾ ಯೋಜನೆಯಿಂದಾಗಿ ಜಿಲ್ಲೆಯಲ್ಲಿ 1,09,888 ರೈತರಿಗೆ 371.42 ಕೋಟಿ ರುಪಾಯಿ ಸಾಲ ಮನ್ನಾ ಸೌಲಭ್ಯ ದೊರೆತಿದ್ದು, ರೈತರಿಗೆ ನೆಮ್ಮದಿ ಸಿಕ್ಕಿದೆ. 'ಅನ್ನಭಾಗ್ಯ' ಯೋಜನೆಯಡಿ ಜಿಲ್ಲೆಯಲ್ಲಿ 5,41,042 ಬಿಪಿಎಲ್ ಕುಟುಂಬಗಳು ಹಾಗೂ 30,031 ಅಂತ್ಯೋದಯ ಕಾರ್ಡ್‍ದಾರರಿಗೆ ಉಚಿತವಾಗಿ ಅಕ್ಕಿ ವಿತರಿಸಲಾಗುತ್ತಿದೆ. ತುಮಕೂರು ತಾಲೂಕಿನ ದಿಬ್ಬೂರಿನಲ್ಲಿ ಒಂದೆಡೆ 1200 ಮನೆಗಳನ್ನು ಕೊಳೆಗೇರಿ ನಿವಾಸಿಗಳಿಗೆ ಒದಗಿಸಲಾಗಿದೆ.
Comments