ಮಹದಾಯಿ ವಿಚಾರದಲ್ಲಿ ರಾಷ್ಟೀಯ ಪಕ್ಷಗಳಿಂದ ರಾಜಕೀಯ : ಎಚ್ ಡಿ ಕುಮಾರಸ್ವಾಮಿ

ಮಹದಾಯಿ ವಿಚಾರದಲ್ಲಿ ಗೋವಾ ಮುಖ್ಯಮಂತ್ರಿ ಪರಿಕ್ಕರ್ ಅವರು ಯಡಿಯೂರಪ್ಪ ಅವರಿಗೆ ಪತ್ರ ಬರೆದರೆ ಪರಿಹಾರ ಸಾಧ್ಯವಿಲ್ಲ. ಮಹದಾಯಿ ಸಮಸ್ಯೆ ಪರಿಹಾರಕ್ಕೆ ಎರಡು ವಿಧಾನಗಳಿಗೆ. ಮೊದಲನೆಯದಾಗಿ ಪ್ರಧಾನಿ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಬೇಕು ಅಥವಾ ಮೂರು ರಾಜ್ಯಗಳು ನ್ಯಾಯಾಧೀಕರಣಕ್ಕೆ ಅರ್ಜಿ ಸಲ್ಲಿಸಿ, ನೀರು ಬಿಡುಗಡೆಗೆ ಅಭ್ಯಂತರವಿಲ್ಲವೆಂದು ಹೇಳಬೇಕು ಎಂದು ತಿಳಿಸಿದರು.
ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಮಹದಾಯಿ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್. ಡಿ. ಕುಮಾರಸ್ವಾಮಿ ಹೇಳಿದರು. ಎತ್ತಿನಹೊಳೆ ಯೋಜನೆ ಕೇವಲ ಹಣ ಮಾಡುವ ಯೋಜನೆ. ಅಲ್ಲಿಂದ ನೀರು ಹರಿಯುವುದಿಲ್ಲ. ಹಾಗೊಂದು ವೇಳೆ ಅಲ್ಲಿಂದ ನೀರು ಬರುತ್ತಿದ್ದಂತೆ ಬೆಂಗಳೂರಿನ ಕೊಳಚೆ ನೀರನ್ನು ಸಂಸ್ಕರಿಸಲು ಸಾವಿರಾರು ಕೋಟಿ ರೂ. ವ್ಯಯಿಸುವ ಅವಶ್ಯಕತೆ ಏನಿತ್ತು ಎಂದವರ ಪ್ರಶ್ನಿಸಿದರು.
Comments