ಗೋವಾದಲ್ಲಿ ರಜೆಯ ಮಜಾ ಸವಿಯುತ್ತಿರುವ ಸೋನಿಯಾ ಗಾಂಧಿ
ಸುದೀರ್ಘ ಅವಧಿಗೆ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ ಅವರು, ಪುತ್ರ ರಾಹುಲ್ ಗಾಂಧಿ ಅವರಿಗೆ ಜವಾಬ್ದಾರಿಯನ್ನು ವರ್ಗಾಯಿಸಿದ್ದಾರೆ. ಅವರೀಗ ರಜೆ ಕಳೆಯಲು ಗೋವಾಕ್ಕೆ ಬಂದಿದ್ದಾರೆ. ಗೋವಾದಲ್ಲಿ ರಜೆಯ ಮಜಾ ಸವಿಯುತ್ತಿರುವ ಅವರು ರಾಜಕೀಯ ಜಂಜಾಟಗಳಿಂದ ದೂರ ಉಳಿದಿದ್ದಾರೆ.
ಡಿಸೆಂಬರ್ 26 ರಂದು ಗೋವಾಕ್ಕೆ ಬಂದಿಳಿದ ಸೋನಿಯಾ ಗಾಂಧಿ ಇಲ್ಲಿಯೇ ಕ್ರಿಸ್ ಮಸ್, ಹೊಸ ವರ್ಷದ ರಜೆಯನ್ನು ಕಳೆದು ಜನವರಿ ಮೊದಲ ವಾರ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಪಕ್ಷದ ಸೋಲಿನ ಕಾರಣಗಳ ಪರಾಮರ್ಶೆ ನಡೆಸಿದ ಅವರು, ರಾಜಕೀಯ ಚಟುವಟಿಕೆಗಳಿಂದ ಬಿಡುವು ಪಡೆದುಕೊಂಡು ಗೋವಾ ಪ್ರವಾಸಕ್ಕೆ ತೆರಳಿದ್ದಾರೆ. ದಕ್ಷಿಣ ಗೋವಾದಲ್ಲಿನ ರೆಸಾರ್ಟ್ ನಲ್ಲಿ ತಂಗಿರುವ ಅವರು ಅಲ್ಲಿಗೆ ಬರುವ ಪ್ರವಾಸಿಗರೊಂದಿಗೆ ಚರ್ಚೆ ನಡೆಸುತ್ತಾರೆ. ಸೈಕ್ಲಿಂಗ್ ಮಾಡುತ್ತಾ ಪ್ರವಾಸಿಗರ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ. ತಮ್ಮ ಇಷ್ಟದ ತಿನಿಸುಗಳ ರುಚಿ ಸವಿದಿದ್ದಾರೆ. ಪ್ರವಾಸಿಗರೊಂದಿಗೆ ಮುಕ್ತವಾಗಿ ಸಂವಹನ ನಡೆಸಿ ಆರಾಮದಾಯಕ ಮನಸ್ಥಿತಿಯಲ್ಲಿದ್ದಾರೆ. ಒಟ್ಟಿನಲ್ಲಿ ರಾಹುಲ್ ಗಾಂಧಿಗೆ ಎ.ಐ.ಸಿ.ಸಿ. ಜವಾಬ್ದಾರಿ ವಹಿಸಿದ ಬಳಿಕ ಸೋನಿಯಾ ಗಾಂಧಿ ನಿರಾಳರಾಗಿದ್ದು, ರಜೆಯ ಮೂಡ್ ನಲ್ಲಿದ್ದಾರೆ.
Comments