ಮಹದಾಯಿ ಹೋರಾಟಗಾರರನ್ನು ಭೇಟಿಯಾಗದ ರಾಜ್ಯಪಾಲರು
ರಾಜ್ಯಪಾಲರಿಗೆ ಮನವಿ ಸಲ್ಲಿಸಲು ಪಾದಯಾತ್ರೆಯಲ್ಲಿ ತೆರಳಿದ್ದ ಮಹದಾಯಿ ಹೋರಾಟಗಾರರು ರಾಜ್ಯಪಾಲರ ಭೇಟಿಗೆ ಅವಕಾಶ ದೊರೆಯದೆ ವಾಪಸಾಗಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ರೈತಸೇನಾ ರಾಜ್ಯಾಧ್ಯಕ್ಷ ವೀರೇಶ್ ಸೊಬರದ ಮಠ, ನಿನ್ನೆಯೇ ರಾಜ್ಯಪಾಲರ ಭೇಟಿಗೆ ಅವಕಾಶ ಕೇಳಿದ್ದರೂ, ರಾಜ್ಯಪಾಲರಿಗೆ ಮನವಿ ಸಲ್ಲಿಸಲು ಅವಕಾಶ ನೀಡಲಿಲ್ಲ. ಬಳಿಕ ಕಾರ್ಯದರ್ಶಿ ಅವರಿಗೆ ಮನವಿ ಪತ್ರ ನೀಡಿ ಬಂದಿದ್ದೇವೆ ಎಂದು ತಿಳಿಸಿದರು.
ಚುನಾವಣೆ ಆಯೋಗಕ್ಕೂ ಮನವಿ ಸಲ್ಲಿಸಿದ್ದೇವೆ. ಮುಂದಿನ ನಡೆಯನ್ನು ಸದ್ಯದಲ್ಲೇ ತೀರ್ಮಾನಿಸಲಿದ್ದೇವೆ. ಚಲನಚಿತ್ರ ವಾಣಿಜ್ಯ ಮಂಡಳಿ ಪ್ರಮುಖರೊಂದಿಗೂ ಚರ್ಚೆ ನಡೆಸುತ್ತೇವೆ. ಇದೀಗ ಎಲ್ಲಾ ರೈತರು ಸಿಎಂ ಮನೆಗೆ ತೆರಳಲಿದ್ದಾರೆ ಎಂದರು. ರಾಜಭನವದೊಳಗೆ ತೆರಳಲು ಕೇವಲ ಐವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಅದರಂತೆ ರೈತಸೇನಾ ರಾಜ್ಯಾಧ್ಯಕ್ಷ ವೀರೇಶ್ ಸೊಬರದಮಠ, ರೈತಸೇನಾ ಉಪಾಧ್ಯಕ್ಷ ವೀರೇಶ್ ಅಂಬಲಿ, ರೈತ ಮುಖಂಡ ಎಸ್.ಪಾಟೀಲ್ ಸೇರಿ ಐವರನ್ನು ಪೊಲೀಸರು ಕರೆದೊಯ್ದಿದ್ದರು. ಉಳಿದವರನ್ನು ಚಾಲುಕ್ಯ ಸರ್ಕಲ್ನಲ್ಲೇ ಪೊಲೀಸರು ಬ್ಯಾರಿಕೇಡ್ ಹಾಕಿ ತಡೆದರು. ರೈತರ ಪಾದಯಾತ್ರೆ ಶುರುವಾಗುತ್ತಿದ್ದಂತೆಯೇ ಪಾದಯಾತ್ರೆಯುದ್ದಕ್ಕೂ ಬೆಂಗಳೂರಿಗರು ರಸ್ತೆ ಬದಿ ನಿಂತು ರೈತರ ಒಗ್ಗಟ್ಟನ್ನು ವೀಕ್ಷಣೆ ಮಾಡಿದರು.
Comments