Report Abuse
Are you sure you want to report this news ? Please tell us why ?
ಪ್ರತಿಭಟನೆ ನಡೆಸುವ ವೇಳೆ ಬಿಜೆಪಿ ನಾಯಕ ಆರ್.ಅಶೋಕ್ ಗಾಯ

27 Dec 2017 5:15 PM | Politics
363
Report
ಮಹದಾಯಿ ವಿಚಾರದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಚೇರಿ ಮುಂದೆ ಪ್ರತಿಭಟನೆ ನಡೆಸುವ ವೇಳೆ ಬಿಜೆಪಿ ನಾಯಕ ಆರ್.ಅಶೋಕ್ ಗಾಯಗೊಂಡಿದ್ದಾರೆ. ಬುಧವಾರ ಕೆಪಿಸಿಸಿ ಕಚೇರಿಗೆ ಮುತ್ತಿಗೆ ಹಾಕಲು ಬಿಜೆಪಿ ನಾಯಕರು ಮುಂದಾದರು.
ಈ ಸಮಯದಲ್ಲಿ ಪೊಲೀಸರು ಅವರನ್ನು ವಶಕ್ಕೆ ಪಡೆದರು. ಪೊಲೀಸರು ವಶಕ್ಕೆ ಪಡೆಯುವ ವೇಳೆ ಅಶೋಕ್ ತಲೆಗೆ ಬ್ಯಾರಿಕೇಡ್ ತಗುಲಿತು ಎನ್ನಲಾಗಿದೆ. ನಂತರ ಆರ್.ಅಶೋಕ್ ಅವರು ಮಲ್ಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದರು. ಪೊಲೀಸರು ಬಿಜೆಪಿ ನಾಯಕರ ತಳ್ಳಾಟದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ.

Edited By
Shruthi G

Comments