ನೀರಿನ ವಿಚಾರದಲ್ಲಿ ಪಕ್ಷಾತೀತರಾಗಿ ಸಮಸ್ಯೆ ಬಗೆಹರಿಸುವವರಿಗೆ ನನ್ನಬೆಂಬಲ: ದೇವನೂರು

ಮಹದಾಯಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿ ಪ್ರತಿಭಟನಾ ನಿರತರನ್ನು ಭೇಟಿ ಮಾಡಿ ಮಾತನಾಡಿದ ಅವರು, ರೈತರ ಸಮಸ್ಯೆಯನ್ನು ಬಗೆಹರಿಸಲು ಯಾರೇ ಬಂದರೂ ಅವರಿಗೆ ನನ್ನ ಬೆಂಬಲವಿದೆ. ಈ ಕುರಿತು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಯಾವುದೇ ಪಕ್ಷ ಮುಂದೆ ಬಂದರೂ ಆ ಪಕ್ಷಕ್ಕೆ ನನ್ನ ಬೆಂಬಲ ದೊರೆಯುತ್ತದೆ ಎಂದು ಸಾಹಿತಿ ದೇವನೂರ ಮಹದೇವ ಹೇಳಿದರು.
ನೀರಿನ ವಿಚಾರ ಬಂದಾಗ ಪಕ್ಷಾತೀತ ಬೆಂಬಲ ನೀಡಬೇಕು. ಇಲ್ಲಿ ಯಾವುದೇ ಪಕ್ಷ, ರಾಜಕೀಯ ಮುಖ್ಯವಲ್ಲ ಎಂದು ಸಾಹಿತಿ ದೇವನೂರ ಮಹದೇವ ಹೇಳಿದರು. ಮಹದಾಯಿ ವಿಚಾರ ಕುರಿತು ಮೈಸೂರು ಭಾಗದ ರೈತರಿಗೂ ಸೂಚಿಸಿದ್ದೇನೆ. ಉತ್ತರ ಕರ್ನಾಟಕದ ರೈತರಿಗೆ ಅವರು ಬೆಂಬಲ ನೀಡುತ್ತಾರೆ. ರೈತ ಪರ ಹೋರಾಟಕ್ಕೆ ಸದಾ ಬೆಂಬಲ ಇದ್ದೇ ಇರುತ್ತದೆ ಎಂದು ಹೇಳಿದರು.
Comments