ಸ್ಪರ್ಧಿಗಳಿಗೆ ಶಾಕ್ ಕೊಟ್ಟ 'ಬಿಗ್ ಬಾಸ್'.!
'ಬಿಗ್ ಬಾಸ್' ಸೂಪರ್ ಟಿ.ವಿ. ಶೋ ಸಖತ್ತಾಗಿತ್ತು. ಟಿ.ವಿ. ವಾಹಿನಿಯಲ್ಲಿರುವಂತೆಯೇ ಕ್ರೀಡೆ, ನೃತ್ಯ, ಹಾಸ್ಯ, ಧಾರಾವಾಹಿ, ಟಾಕ್ ಶೋ ಮೊದಲಾದವುಗಳನ್ನು ಪ್ರದರ್ಶಿಸುವಂತೆ ಸದಸ್ಯರಿಗೆ ತಿಳಿಸಲಾಗಿದೆ.
ಮಧ್ಯ ರಾತ್ರಿ ಬಿಗ್ ಶಾಕ್ ಕೊಟ್ಟ 'ಬಿಗ್ ಬಾಸ್' ಮನೆಯಿಂದ ಹೊರ ಹೋಗುವ ಪ್ರಕ್ರಿಯೆ ಈಗ ಆರಂಭವಾಗುತ್ತಿದೆ ಎಂದು ಹೇಳುತ್ತಿದ್ದಂತೆ ಸದಸ್ಯರು ನಿದ್ದೆಯಲ್ಲೇ ಎದ್ದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮೊದಲಿಗೆ ಕಾರ್ತಿಕ್, ಕೃಷಿ ಸೇಫ್ ಆಗಿದ್ದು, ಉಳಿದವರು ಲಿವಿಂಗ್ ಏರಿಯಾಗೆ ಬಂದಿದ್ದಾರೆ. ಅಲ್ಲಿ ಚಂದನ್, ನಿವೇದಿತಾ, ಅನುಪಮಾ ಸೇಫ್ ಆಗಿದ್ದಾರೆ. ಪ್ರಕ್ರಿಯೆ ಮುಗಿಯುವವರೆಗೆ ಅಲ್ಲೇ ಇರುವಂತೆ ಸದಸ್ಯರಿಗೆ ಸೂಚಿಸಲಾಗಿದೆ. ಉಳಿದ ಸದಸ್ಯರಾದ ಶ್ರುತಿ, ಸಮೀರಾಚಾರ್ಯ ಮತ್ತು ದಿವಾಕರ್ ಗಾರ್ಡನ್ ಏರಿಯಾಗೆ ಬಂದಿದ್ದು, ಅವರಲ್ಲಿ ಒಬ್ಬರು ಮನೆಯಿಂದ ನಿರ್ಗಮಿಸಬೇಕಿದೆ. ಮನೆಯಿಂದ ಹೊರ ಹೋಗಬೇಕಿದ್ದ ಸದಸ್ಯರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಮೂವರಲ್ಲಿ ಮನೆಯಿಂದ ಯಾರು ಹೋಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಜಯಶ್ರೀನಿವಾಸನ್ ಅವರನ್ನು ಕನ್ ಫೆಷನ್ ರೂಂಗೆ ಕರೆಸಿಕೊಂಡ 'ಬಿಗ್ ಬಾಸ್' ಅಲ್ಲಿಂದ ಕಣ್ಣಿಗೆ ಬಟ್ಟೆ ಕಟ್ಟಿಸಿ ಸೀಕ್ರೆಟ್ ರೂಂಗೆ ಬಿಟ್ಟಿದ್ದಾರೆ.
ಮನೆಯೊಳಗೆ ಎಂಟ್ರಿ ಪಡೆದ ಸಂದರ್ಭದಲ್ಲಿ ಹಲವು ಗಂಟೆಗಳ ಕಾಲ ಯಾರಿಗೂ ತಿಳಿಯದಂತೆ ಇದ್ದೆ. ಈಗ ಸೀಕ್ರೆಟ್ ರೂಂನಲ್ಲಿ ಯಾರಿಗೂ ತಿಳಿಯದಂತೆ ಇರಬೇಕಿದೆ ಎಂದು ಜಯಶ್ರೀನಿವಾಸನ್ ಹೇಳಿದ್ದಾರೆ. ಕನ್ ಫೆಷನ್ ರೂಂನಿಂದ ಜಯಶ್ರೀನಿವಾಸನ್ ಅವರು ನಾಪತ್ತೆಯಾಗಿರುವುದು ಸದಸ್ಯರಿಗೆ ಅಚ್ಚರಿ ಮೂಡಿಸಿದೆ. ಅವರ ಬಗ್ಗೆಯೇ ಹಲವು ಸದಸ್ಯರು ಮಾತನಾಡಿಕೊಂಡಿದ್ದಾರೆ. ಜಯಶ್ರೀನಿವಾಸನ್ ಸೀಕ್ರೆಟ್ ರೂಂನಲ್ಲಿ ಕುಳಿತು, ಮನೆಯೊಳಗಿನ ದೃಶ್ಯಗಳನ್ನು ವೀಕ್ಷಿಸಿದ್ದಾರೆ. ದಿವಾಕರ್, ಜಯಶ್ರೀನಿವಾಸನ್, ಕೃಷಿ, ನಿವೇದಿತಾ, ಸಮೀರಾಚಾರ್ಯ ಅವರು ಈ ವಾರ ನಾಮಿನೇಟ್ ಆಗಿದ್ದಾರೆ. ಮನೆಯೊಳಗಿನ ಸದಸ್ಯರಿಗೆ ಈ ಮಾಹಿತಿ ಇಲ್ಲವಾಗಿದೆ. ಹೊರ ಹೋಗುವುದ್ಯಾರು ಎಂಬುದು ಕುತೂಹಲ ಮೂಡಿಸಿದೆ.
Comments