ಸಿದ್ದರಾಮಯ್ಯ ಸರ್ಕಾರ ಟೆಂಡರ್ ಕರೆಯುವುದರ ಬಗ್ಗೆ ಎಚ್ ಡಿಕೆ ಹೇಳಿದ್ದೇನು?

ನೂರಾರು ಕೋಟಿ ಕಾಮಗಾರಿಗೆ ಸಿಎಂ ಚಾಲನೆ ಕೊಡುತ್ತಿದ್ದಾರೆ. ಇದು ಕಂಟ್ರಾಕ್ಟರ್ ಬಳಿ ಕಮಿಷನ್ ಪಡೆಯುವ ಉದ್ದೇಶವಿದೆ.ಟೆಂಡರ್ ಪ್ರಕ್ರಿಯೆಗೆ ಈಗ ಚಾಲನೆ ಕೊಡುತ್ತೇವೆ ಎನ್ನುತ್ತಿದ್ದಾರೆ, ಈಗ ಟೆಂಡರ್ ಕರೆಯೋದು ದುಡ್ಡು ಹೊಡೆಯೋಕೆ ಅಷ್ಟೆ ಎಂದು ಮಾಜಿ ಸಿಎಂ ಕುಮಾರಸ್ವಾಮಿಯವರು ಆರೋಪಿಸಿದರು.
ಸಭೆ ನಡೆಸಿದಲ್ಲೆಲ್ಲಾ ಕೋಟಿ ಕೋಟಿ ರೂ. ಕೊಡುತ್ತೇವೆ ಎಂದು ಸಿಎಂ ಹೇಳುತ್ತಿದ್ದಾರೆ, ಅಷ್ಟೊಂದು ಹಣ ಎಲ್ಲಿಟ್ಟಿದ್ದೀರಾ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ನಿಮ್ಮ ಹಣೆಬರಹಕ್ಕೆ ಇರೋದೇ ಮೂರು ತಿಂಗಳು, ಅಷ್ಟರಲ್ಲಿ ಎಷ್ಟು ಕೆಲಸ ಮಾಡುತ್ತೀರಿ ಎಂದು ಪ್ರಶ್ನಿಸಿದರು. ಸಿಎಂ ಭಾಷಣದಲ್ಲಿ 4 ವರ್ಷದ ಸಾಧನೆ ಹೇಳಲ್ಲ, ಬಿಎಸ್ವೈ ಜೈಲಿಗೆ ಹೋಗಿರುವ ವಿಷಯವನ್ನೇ ಹೇಳುತ್ತಾ ಹೋಗುತ್ತಿದ್ದಾರೆ. ಮುಂದೆ ದಿನದ 24 ಗಂಟೆ ಸಿದ್ದರಾಮಯ್ಯ ಕೋರ್ಟ್ ಮುಂದೆ ಇರಬೇಕಾಗುತ್ತದೆ ಎಂದರು. ಸಿಎಂ ಈಗ ಇಬ್ರಾಹಿಂ ಅವರ ಸ್ಥಾನ ತುಂಬಿದ್ದಾರೆ ಎಂದು ಪತ್ರಿಕೆಗಳಲ್ಲೇ ಬಂದಿದೆ. ವಿದೂಷಕರ ಪಾತ್ರ ಮಾಡೋಕೆ ಸರ್ಕಾರದ ಹಣ ಬೇಕೆ ಎಂದು ಲೇವಡಿ ಮಾಡಿದರು. ಜ.5 ರಿಂದ ಪ್ರವಾಸ ಆರಂಭಿಸಲಿದ್ದೇವೆ ಮಾಡಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
Comments