ದೇಶದಲ್ಲಿ ಗಲಭೆ ಉಂಟು ಮಾಡುವ ಹೇಳಿಕೆಗಳು ಪ್ರಚೋದನೆಗೆ ಕಾರಣ: ಮಧು ಬಂಗಾರಪ್ಪ

ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರು ಸಂವಿಧಾನದ ವಿರುದ್ಧವಾಗಿ ನಡೆಯುತ್ತಿದ್ದು, ಸಭೆ ಸಮಾರಂಭಗಳಲ್ಲಿ ದೇಶದಲ್ಲಿ ಗಲಭೆ ಉಂಟು ಮಾಡುವಂತಹ ಹೇಳಿಕೆಗಳನ್ನು ನೀಡುವ ಮೂಲಕ ಪ್ರಚೋದನೆ ಎಂದು ಶಾಸಕ ಮಧು ಬಂಗಾರಪ್ಪ ಆರೋಪಿಸಿದರು.
ತಾಲೂಕಿನ ಬಿಳವಾಣಿ ಗ್ರಾಪಂ ವ್ಯಾಪ್ತಿಯ ಬೆದವಟ್ಟಿ, ಗೇರುಕೊಪ್ಪ, ಬಿಳವಾಣಿ ಗ್ರಾಮಗಳ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಯ ಗುದ್ದಲಿಪೂಜೆ ಹಾಗೂ ಶಿವಪುರ ಗ್ರಾಮದ ಅಂಗನವಾಡಿ ನೂತನ ಕಟ್ಟಡದ ಉದ್ಘಾಟನೆಯನ್ನು ಸೋಮವಾರ ನೆರವೇರಿಸಿ, ಬಿಳವಾಣಿ ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು. ಘನತೆ, ಗೌರವಗಳನ್ನು ಬಿಟ್ಟು ಬಿಜೆಪಿ ಸೇರಿರುವ ಕುಮಾರ್ ಬಂಗಾರಪ್ಪ ಅವರಿಗೆ ತಾಲೂಕಿನ ಜನತೆ ಈ ಬಾರಿಯೂ ಸೋಲಿನ ರುಚಿ ನಿಶ್ಚಿತ ಎಂದರು.
Comments