ಕೋಲಾರ ವಿಧಾನಸಭಾ ಕ್ಷೇತ್ರದಿಂದ ಅನಿತಾ ಕುಮಾರಸ್ವಾಮಿ ಸ್ಪರ್ಧೆ..!!

2018 ರ ವಿಧಾನ ಸಭಾ ಚುನಾವಣೆಗೆ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಅನಿತಾ ಕುಮಾರಸ್ವಾಮಿ ಸ್ಪರ್ಧೆ ಮಾಡುವಂತೆ ಕ್ಷೇತ್ರದ ಕಾರ್ಯಕರ್ತರು ಒತ್ತಡ ಹೇರಿದ್ದಾರೆ ಎನ್ನಲಾಗಿದೆ.
ಈ ಬಾರಿ ಕೋಲಾರದಲ್ಲಿ ಜಿಡಿಎಸ್ ನಿಂದ ಸ್ಪರ್ಧಿಸುವ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು, ಅಭ್ಯರ್ಥಿ ಆಗುವವರ ನಡುವೆ ಹೆಚ್ಚಿನ ಗೊಂದಲ ಉಂಟಾಗುತ್ತಿದೆ. ಅಲ್ಲದೇ ಈ ಹಿಂದೆ ಐಎಎಸ್ ಅಧಿಕಾರಿ ಡಿಕೆ ರವಿ ಅವರ ತಾಯಿ ಗೌರಮ್ಮರನ್ನು ಭೇಟಿ ಮಾಡಿದ್ದ ಜಿಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು, ಹೊಸ ಪಕ್ಷ ಕಟ್ಟುವ ಗೋಜಿಗೆ ಹೋಗಬೇಡಿ. ನೀವು ಸೂಚಿಸಿದ ಅಭ್ಯರ್ಥಿಗೆ ಪಕ್ಷದಿಂದ ಟಿಕೆಟ್ ಕೊಡುತ್ತೇವೆ. ಜೆಡಿಎಸ್ ಗೆ ಬೆಂಬಲಿಸಿ ಎಂದು ಮನವಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಅನಿತಾ ಕುಮಾರಸ್ವಾಮಿ ಸ್ಪರ್ಧೆಗೆ ಆಗ್ರಹಿಸಿರುವ ಕೋಲಾರ ಕಾರ್ಯಕರ್ತರು, ಚನ್ನಪಟ್ಟಣದ ಬದಲು ಕೋಲಾರದಲ್ಲಿ ಅನಿತಾ ಕುಮಾರಸ್ವಾಮಿ ಸ್ಪರ್ಧಿಸಲಿ. ಕೋಲಾರದ ಜಿಲ್ಲೆ ಅನಿತಾ ಅವರ ತವರು ಮನೆ ಆಗಿರುವುದರಿಂದ ಎಲ್ಲಾ ಟಿಕೆಟ್ ಆಕಾಂಕ್ಷಿಗಳು ಅವರನ್ನು ಬೆಂಬಲಿಸುತ್ತಾರೆ. ಪಕ್ಷದಲ್ಲಿ ಟಿಕೆಟ್ ಗೊಂದಲ ಬಗೆಹರಿಯುತ್ತದೆ ಎಂದು ಕೋರಿದ್ದಾರೆ ಎನ್ನಲಾಗಿದೆ. ಜೆಡಿಎಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳ ಸಭೆ ನಡೆಯಲಿದ್ದು, ಈ ವಿಚಾರವನ್ನು ಕಾರ್ಯಕರ್ತರು ಮತ್ತೊಮ್ಮೆ ಪ್ರಸ್ತಾಪ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
Comments