ಮಾತು ಕೊಟ್ಟು ಪೇಚಿಗೆ ಸಿಲುಕಿದ ಬಿಎಸ್ ವೈ, ಹೋರಾಟ ಬೆಂಬಲಿಸಲಿರುವ ಯಶ್

ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಮುಂದೆ ನಡೆಯುತ್ತಿರುವ ಮಹದಾಯಿ ಹೋರಾಟದಲ್ಲಿ ಮಂಗಳವಾರ ಮಧ್ಯಾಹ್ನ ಹಲವು ಸ್ಯಾಂಡಲ್ ವುಡ್ ನಟ-ನಟಿಯರು ಭಾಗವಹಿಸಿಲಿದ್ದಾರೆ ಎಂದು ಫಿಲ್ಮ್ ಛೇಂಬರ್ ಅಧ್ಯಕ್ಷ ಸಾ.ರಾ.ಗೋಮಿಂದು ತಿಳಿಸಿದರು. ಮುಖ್ಯವಾಗಿ ನಟ ಯಶ್ ಅವರೂ ಸಹ ಮಹದಾಯಿ ಅಖಾಡಕ್ಕೆ ಇಳಿಯಲಿದ್ದು, ಹೋರಾಟಕ್ಕೆ ಮತ್ತಷ್ಟು ಬಲ ಬರಲಿದೆ.
ಮತ್ತೊಂದೆಡೆ ಬಿಜೆಪಿ ತಾನು ಕೊಟ್ಟ ಮಾತನ್ನು ಉಳಿಸಿಕೊಳ್ಳಲು ರಾಷ್ಟ್ರೀಯ ನಾಯಕ ಜತೆ ಮಾತುಕತೆಯಲ್ಲಿ ತೊಡಗಿದ್ದಾರೆ. ಕರ್ನಾಟಕ ಬಿಜೆಪಿ ಕಚೇರಿ ಮುಂದೆ ನೂರಾರು ರೈತರು ನಾಲ್ಕು ದಿನದಿಂದ ಧರಣಿ ನಡೆಸುತ್ತಿದ್ದು, ಯಡಿಯೂರಪ್ಪ ಆಗಮಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇದರಿಂದ ಮುಂದಿನ ನಡೆ ಬಗ್ಗೆ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಿತು. ಮಹದಾಯಿ ವಿಚಾರದ ಬಗ್ಗೆ ಬಿಎಸ್ ವೈ ರಾಷ್ಟ್ರೀಯ ನಾಯಕರ ಗಮನಕ್ಕೆ ತಂದಿದ್ದು, ಕೂಡಲೇ ಪ್ರತಿಭನಾ ಸ್ಥಳಕ್ಕೆ ಭೇಟಿ ನೀಡುವಂತೆ ಅಮಿಶಾ ಅವರು ಯಡಿಯೂರಪ್ಪಗೆ ತಾಕೀತು ಮಾಡಿದ್ದಾರೆ ಎಂದು ಹೇಳಲಾಗಿದೆ.
ಮಹದಾಯಿ ನದಿ ನೀರು ಬಗೆಹರಿಸುವಂತೆ ನಾಳೆ ಅಂದರೆ ಡಿಸೆಂಬರ್ 27 ರಂದು ಉತ್ತರ ಕರ್ನಾಟಕಕ್ಕೆ ಬಂದ್ ಕರೆ ನೀಡಲಾಗಿದೆ. ಇದಕ್ಕೆ ಸ್ಯಾಂಡಲ್ ವುಡ್ ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ಸೂಚಿಸಿದ್ದಾರೆ. ಬೆಳಗಾವಿ, ಗದಗ, ಧಾರವಾಡ, ಬಾಗಲಕೋಟೆ ಸೇರಿದಂತೆ ಇತರೆ ಉತ್ತರ ಕರ್ನಾಟಕ ಜಿಲ್ಲೆಗಳು ಬಂದ್ ಆಗಲಿವೆ.
ಜನವರಿ 10ರಂದು ಬೆಂಗಳೂರಿನಲ್ಲಿ ಮಹದಾಯಿ ಸಮ್ಮೇಳನ ನಡೆಯಲಿದ್ದು, ಇದರಲ್ಲಿ ಪಕ್ಷಾತೀತವಾಗಿ ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಭಾಗವಹಿಸಬೇಕೆಂದು ವಾಟಳ್ ನಾಗರಾಜ್ ಆಗ್ರಹಿಸಿದರು.
Comments