ಡಿಸೆಂಬರ್ 31ರಂದು ರಾಜಕೀಯ ನಿಲುವಿನ ಬಗ್ಗೆ ತಿಳಿಸಲಿರುವ ರಜನಿ
ರಾಜಕೀಯಕ್ಕೆ ಪ್ರವೇಶಿಸಬೇಕೇ, ಬೇಡವೇ ಎಂಬ ತನ್ನ ನಿಲುವನ್ನು ಡಿ.31 ರಂದು ಘೋಷಿಸುವೆ ಎಂದು ತಮಿಳುನಾಡಿನ ಸೂಪರ್ ಸ್ಟಾರ್ ರಜನೀಕಾಂತ್ ಹೇಳಿದ್ದಾರೆ. ''ವಂಚನೆಯ ಬಗ್ಗೆ ಅರಿವಿರುವ ಕಾರಣ ನಾನು ರಾಜಕಾರಣಕ್ಕೆ ಪ್ರವೇಶಿಸಲು ಹಿಂದೆ ಮುಂದೆ ನೋಡುತ್ತಿದ್ದೇನೆ. ನಾನು ರಾಜಕೀಯಕ್ಕೆ ಹೊಸಬನಲ್ಲ. ನನಗೆ ಅದರ ಆಳ-ಅಗಲ ಗೊತ್ತಿದೆ. 1996ರಿಂದ ರಾಜಕೀಯವನ್ನು ತುಂಬಾ ಹತ್ತಿರದಿಂದ ನೋಡುತ್ತಿದ್ದೇನೆ ಎಂದು ರಜನಿ ಕಾಂತ್ ಹೇಳಿದರು.
ನಾನು ರಾಜಕಾರಣಕ್ಕೆ ಪ್ರವೇಶಿಸಿದರೆ ಗೆಲ್ಲುವುದು ನಿಶ್ಚಿತ. ಅದಕ್ಕೆ ರಣನೀತಿಯ ಅಗತ್ಯವಿದೆ'' ಎಂದು ಕಾಂಚಿಪುರಂ, ತಿರುವಲ್ಲೂರು, ಕೃಷ್ಣಗಿರಿ, ಧರ್ಮಪುರಿ ಹಾಗೂ ನೀಲಗಿರಿ ಜಿಲ್ಲೆಗಳಿಂದ ಬಂದಿರುವ ಅಭಿಮಾನಿಗಳನ್ನು ಉದ್ದೇಶಿಸಿ ರಜನೀಕಾಂತ್ ಮಾತನಾಡುತ್ತಾ ಹೇಳಿದ್ದಾರೆ. ಮೇನಲ್ಲಿ ರಜನೀಕಾಂತ್ ಅವರು ಕುಡಲೂರು, ತಿರುಚ್ಚಿ, ತಿರುನೆವಿಲಿ, ಚಿದಂಬರಂ, ರಮನಾಥಪುರಂ, ದಿಂಡಿಗಲ್ ಹಾಗೂ ಶಿವಗಂಗಾ ಸಹಿತ 17 ಜಿಲ್ಲೆಗಳ ಅಭಿಮಾನಿಗಳನ್ನು ಭೇಟಿಯಾಗಿದ್ದರು. ಡಿ.31ಕ್ಕೆ ಮೊದಲು ಉಳಿದ ಜಿಲ್ಲೆಗಳ ಅಭಿಮಾನಿಗಳನ್ನು ಭೇಟಿಯಾಗಲಿದ್ದಾರೆ.
Comments