ಕೆಪಿಜೆಪಿ ಪಕ್ಷದ ಪ್ರಣಾಳಿಕೆಯಲ್ಲಿ ಏನಿದೆ?

26 Dec 2017 10:54 AM | Politics
334 Report

ಜನಪ್ರತಿನಿಧಿಗಳಲ್ಲದೆ, ಎಲ್ಲಾ ನೀತಿ ನಿಯಮಗಳು ಸರ್ಕಾರಿ ಅಧಿಕಾರಿಗಳು,ನೌಕರರಿಗೂ ಅನ್ವಯವಾಗಲಿದೆ.ಸಂಪೂರ್ಣ ಪಾರರ್ದಶಕ ಹಾಗೂ ಸರಳ ಆಡಳಿತ ನಡೆಸುವ ಭರವಸೆಯನ್ನು ನೀಡಿದ್ದಾರೆ.ಸಂಭಾವ್ಯ ಪ್ರಣಾಳಿಕೆಯ ಭಾಗ -1ರಲ್ಲಿ 24 ಅಂಶಗಳಿವೆ.

ಸಂಪೂರ್ಣ ಪಾರದರ್ಶಕ, ಸರಳ, ಹೊಣೆಗಾರಿಕೆಯುಳ್ಳ, ಮಿತವ್ಯಯೀ ಹಾಗೂ ಪ್ರಜೆಗಳನ್ನೊಳಗೊಂಡ ಆಡಳಿತ. 2. ಪ್ರಜೆಗಳ ನೇರ ಸಂಪರ್ಕಕ್ಕಾಗಿ, ಸರ್ಕಾರದಿಂದ ಸರ್ಕಾರದ್ದೇ ಆದ ಟೆಲಿವಿಜನ್ ಚಾನಲ್, ಪ್ರತಿಯೊಂದು ಇಲಾಖೆಗಳಲ್ಲಿ ಹಾಗೂ ಕ್ಷೇತ್ರಗಳಲ್ಲಿ ಪ್ರತ್ಯೇಕವಾಗಿ ಸಾಮಾಜಿಕ ಜಾಲತಾಣಗಳು (ಫೇಸ್‍ಬುಕ್, ಟ್ವಿಟರ್, ವೆಬ್‍ಸೈಟ್, ಯುಟ್ಯೂಬ್ ಚಾನಲ್) ಮತ್ತು ಮೊಬೈಲ್ ಅಪ್ಲಿಕೇಶನ್‍ಗಳನ್ನು ಪ್ರಾರಂಭಿಸಲಾಗುವುದು. ಪ್ರಜೆಗಳ ನೇರ ಸಂಪರ್ಕಕ್ಕಾಗಿ, ಸರ್ಕಾರದಿಂದ ಸರ್ಕಾರದ್ದೇ ಆದ ಟೆಲಿವಿಜನ್ ಚಾನಲ್, ಪ್ರತಿಯೊಂದು ಇಲಾಖೆಗಳಲ್ಲಿ ಹಾಗೂ ಕ್ಷೇತ್ರಗಳಲ್ಲಿ ಪ್ರತ್ಯೇಕವಾಗಿ ಸಾಮಾಜಿಕ ಜಾಲತಾಣಗಳು (ಫೇಸ್‍ಬುಕ್, ಟ್ವಿಟರ್, ವೆಬ್‍ಸೈಟ್, ಯುಟ್ಯೂಬ್ ಚಾನಲ್) ಮತ್ತು ಮೊಬೈಲ್ ಅಪ್ಲಿಕೇಶನ್‍ಗಳನ್ನು ಪ್ರಾರಂಭಿಸಲಾಗುವುದು. ಮೊಬೈಲ್ ಅಪ್ಲಿಕೇಶನ್‍ನಲ್ಲಿ ತಮ್ಮ ಕ್ಷೇತ್ರದ/ ಪ್ರದೇಶದ ಸಮಸ್ಯೆ/ ದೂರುಗಳನ್ನು (ಲಿಖಿತ, ಫೋಟೊ, ವಿಡಿಯೋ, ಆಡಿಯೋ ಮೂಲಕ) ಸಂಬಂಧಪಟ್ಟ ಇಲಾಖೆಗಳ ನೌಕರರು, ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳಿಗೆ (ಗ್ರಾಮ ಪಂಚಾಯತಿ ಸದಸ್ಯರು, ಕಾರ್ಪೋರೇಟರ್) ಸಲ್ಲಿಸಬಹುದು.
ಸಕಾಲಕ್ಕೆ ಸಮಸ್ಯೆಗಳು ಹಾಗೂ ದೂರುಗಳನ್ನು ಉತ್ತಮವಾಗಿ ಪರಿಹರಿಸಿದಂತಹ ಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಕಾರ್ಯಗಳನ್ನು ಪುರಸ್ಕರಿಸಲಾಗುವುದು ಮತ್ತು ಅಂಕಗಳನ್ನು ನೀಡಲಾಗುವುದು. 

ಕನಿಷ್ಟ ಹಾಗೂ ನಿಗದಿತ ಅಂಕಗಳನ್ನು ಉತ್ತಮ ಕಾರ್ಯರೀತಿಯಿಂದ ಪಡೆಯತಕ್ಕದ್ದು, ತಪ್ಪಿದಲ್ಲಿ ಶಿಸ್ತು ಕ್ರಮಗಳೊಂದಿಗೆ ವೇತನದಲ್ಲಿ ಕಡಿತ ಸಹಾ ಮಾಡಲಾಗುತ್ತದೆ. ಕಡ್ಡಾಯವಾಗಿ ಪ್ರತಿ ಸರ್ಕಾರಿ ನೌಕರರು ಪೂರ್ಣ ಹೆಸರು, ಹುದ್ದೆ, ಇಲಾಖೆಯ ಬ್ಯಾಡ್ಜ್ ಗಳನ್ನು ಮತ್ತು ಸಚಿವಾಲಯಗಳ ಅನುಸಾರ ಏಕರೂಪದ ಬಣ್ಣದ ಸಮವಸ್ತ್ರವನ್ನು ಧರಿಸಿರುತ್ತಾರೆ. ಎಲ್ಲಾ ಸರ್ಕಾರಿ ಕಛೇರಿಗಳು ಹಾಗೂ ಇಲಾಖೆಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ (ರಿಜಿಸ್ಟರ್), ವೈಫೈ, ಸಿ.ಸಿ. ಟಿವಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಆಳವಡಿಸಲಾಗುತ್ತದೆ ಮತ್ತು ಸಾರ್ವಜನಿಕರಿಗೆ ಪ್ರದೇಶಗಳಿಗೆ ಅನುಸಾರವಾಗಿ ವೀಕ್ಷಣಾ ಸೌಲಭ್ಯ ಕಲ್ಪಿಸಲಾಗುವುದು. 8. ವಿಧಾನಸೌಧದಲ್ಲಿ ನಡೆಯುವಂತಹ ಪ್ರತಿಯೊಂದು ಚಟುವಟಿಕೆಗಳು, ಯೋಜನೆಗಳು, ಕಾಮಗಾರಿಗಳು, ಚರ್ಚೆಗಳು ಹಾಗೂ ಅಧಿವೇಶನಗಳು ಅಧಿಕೃತ ದಾಖಲೆ, ಪುರಾವೆಗಳು ಹಾಗೂ ದೃಶ್ಯ ಮಾಧ್ಯಮಗಳ ಸಾಕ್ಷಿ & ದಾಖಲೆಗಳೊಂದಿಗೆ ದೊಡ್ಡ ಪರದೆಯ ಮೇಲೆ ಬಿತ್ತರಿಸಿ ಅದರ ಆಧಾರದ ಮೇಲೆಯೇ ಚರ್ಚೆ ನಡೆಸಬೇಕು.



Edited By

Shruthi G

Reported By

Madhu shree

Comments