ಕಾಂಗ್ರೆಸ್‌ನ 25 ಶಾಸಕರಿಗೆ ಸೋಲಿನ ಭೀತಿ

ಕಾಂಗ್ರೆಸ್‌ನ ಹಾಲಿ ಶಾಸಕರಲ್ಲಿ 25 ಮಂದಿಗೆ ಸೋಲುವ ಭೀತಿ ಎದುರಾಗಿದ್ದು, ಮತ್ತೊಮ್ಮೆ ಅಧಿಕಾರ ಹಿಡಿಯುವ ಮಹದಾಸೆ ಹೊಂದಿರುವ ಕಾಂಗ್ರೆಸ್ ನಾಯಕರು ಇದಕ್ಕೆ ಪರ್ಯಾಯ ಮಾರ್ಗ ಹುಡುಕುವ ಕಾರ್ಯ ಆರಂಭಿಸಿದ್ದಾರೆ.
ಕಳೆದ ಚುನಾವಣೆಯಲ್ಲಿ ಕರಾವಳಿ ಹಾಗೂ ಮುಂಬೈ ಕರ್ನಾಟಕದ ಜಿಲ್ಲೆಗಳಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆದ್ದಿತ್ತು. ಆದರೆ ಈ ಬಾರಿ ಇಲ್ಲಿ ಅಷ್ಟು ಸ್ಥಾನ ಸಿಕ್ಕುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಕ್ಷದ ವತಿಯಿಂದ ನಡೆಸಿರುವ ಪ್ರತ್ಯೇಕ ಸಮೀಕ್ಷೆ ಈ ಮಾಹಿತಿ ನೀಡಿದೆ. ಕಾಂಗ್ರೆಸ್‍ಗೆ ಹಿಂದೆ ಅನುಕೂಲವಾಗಿದ್ದ ಕ್ಷೇತ್ರಗಳಲ್ಲಿ ಇದೀಗ ಜೆಡಿಎಸ್ ತಮ್ಮ ಪ್ರಾಬಲ್ಯ ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಈಗಿರುವ ಸ್ಥಾನಗಳಲ್ಲಿ ಕನಿಷ್ಠ 5, ಅಖಂಡ ಧಾರವಾಡ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ತಲಾ 4 ರಿಂದ 5 ಸ್ಥಾನಗಳನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ.
Comments