ಕಾಂಗ್ರೆಸ್ ‘ಪದ್ಮಾವತಿಗೆ’ ಸೆಡ್ಡು ಹೊಡೆಯೋಕೆ ಜೆಡಿಎಸ್ ನ ಅಭ್ಯರ್ಥಿ ಸಿದ್ದ

ರಾಜ್ಯ ರಾಜಕಾರಣಕ್ಕೆ ಮಾಜಿ ಸಂಸದೆ ರಮ್ಯಾ ವಾಪಾಸ್ಸಾಗುವ ಸುದ್ದಿಯಲ್ಲಿಯೇ ಮಂಡ್ಯದಲ್ಲಿ ಸ್ಯಾಂಡಲ್ವುಡ್ ಕ್ವೀನ್ ವಿರುದ್ಧ ಚುನಾವಣಾ ಕಣಕ್ಕೆ ಇಳಿಯಸಿಲು ಜೆಡಿಎಸ್ ನಲ್ಲಿ ಹೊಸ ಅಭ್ಯರ್ಥಿಯನ್ನು ಸಿದ್ಧಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಕ್ರಮಣಕಾರಿ ಟ್ವೀಟ್ ಗಳ ಮೂಲಕ ಎಲ್ಲಡೆ ಗುರುತಿಸಿಕೊಂಡಿರೋ ನಾಗಮಂಗಲ ಮೂಲದ ಐಆರ್‍ಎಸ್ ಅಧಿಕಾರಿ ಲಕ್ಷ್ಮೀ ಅಶ್ವಿನ್ ಗೌಡ ಎಂಬವರನ್ನು ರಮ್ಯಾ ವಿರುದ್ಧ ಕಣಕ್ಕೀಳಿಸಲು ಜೆಡಿಎಸ್ ಚಿಂತನೆ ಮಾಡಿದೆ. ಸದ್ಯ ಲಕ್ಷ್ಮೀ ಗೌಡ ರಾಜಕೀಯದತ್ತ ಒಲವು ತೋರಿದ್ದಾರೆ. ಈಗಾಗಲೇ ನಾಗಮಂಗಲದಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ಲಕ್ಷ್ಮೀ ಅವರಿಗೆ ಎಂಪಿ ಚುನಾವಣೆಯಲ್ಲಿ ಟಿಕೆಟ್ ನೀಡೋದಾಗಿ ಜೆಡಿಎಸ್ ವರಿಷ್ಠರು ಭರವಸೆ ನೀಡಿದ್ದಾರೆ ಎನ್ನಲಾಗಿದೆ.
Comments