ಕೇಂದ್ರ ಸಚಿವ ಅನಂತಕುಮಾರ್ ತಮ್ಮ ಹುದ್ದೆಯ ಘನತೆಯ ಗೌರವಗಳನ್ನು ಗಾಳಿಗೆ ತೂರುತ್ತಿದ್ದಾರೆ - ಆರೋಪ

ಬಾಗಲಕೋಟೆ: ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರ ತಮ್ಮ ಹುದ್ದೆಯ ಘನತೆಯ ಗೌರವಗಳನ್ನು ಗಾಳಿಗೆ ತೂರುತ್ತಿದ್ದಾರೆ ಎಂದು ತೋಟಗಾರಿಕೆ ಸಚಿವ ಎಸ್.ಎಸ್ ಮಲ್ಲಿಕಾರ್ಜುನ ತಿಳಿಸಿದ್ದಾರೆ.
ಬಾಗಲಕೋಟೆ: ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರ ತಮ್ಮ ಹುದ್ದೆಯ ಘನತೆಯ ಗೌರವಗಳನ್ನು ಗಾಳಿಗೆ ತೂರುತ್ತಿದ್ದಾರೆ ಎಂದು ತೋಟಗಾರಿಕೆ ಸಚಿವ ಎಸ್.ಎಸ್ ಮಲ್ಲಿಕಾರ್ಜುನ ತಿಳಿಸಿದ್ದಾರೆ. ಸಂವಿಧಾನ ಬದಲಾಯಿಸುತ್ತೇವೆ ಎಂದು ಹೇಳಿಕೆ ನೀಡಿರುವ ಅನಂತ್ ಕುಮಾರ್ ಹೆಗಡೆ ಅವರ ಬುದ್ಧಿ ಎಂತಹದು ಎಂಬುದು ಗೊತ್ತಾಗುತ್ತದೆ ಎಂದು ಅವರು ಹೇಳಿದರು.
ಎಲ್ಲಾ ಜಾತಿ, ಪಂಗಡವನ್ನು ಒಟ್ಟಾಗಿ ಕರೆದೊಯ್ಯುವ ರಾಷ್ಟ್ರ ನಮ್ಮದು. ಗಾಂಧಿ, ನೆಹರು , ಬೋಸ್ , ಅಂಬೇಡ್ಕರ್ ಭದ್ರವಾಗಿ ಹಾಕಿಕೊಟ್ಟ ಸಂವಿಧಾನದ ಬುನಾದಿ ಮೇರೆಗೆ ನಾವು ಮುನ್ನಡೆಯುತ್ತಿದ್ದೇವೆ ಎಂದು ಸಚಿವರು ತಿಳಿಸಿದರು. ವೀರಶೈವ ಹಾಗೂ ಲಿಂಗಾಯತ ಒಂದೇ ಅಂಥ ಕೆಲವರು , ಅವು ಬೇರೆ ಬೇರೆ ಅಂಥ ಕೆಲವರು ಹೇಳುತ್ತಿದ್ದಾರೆ, ವೀರಶೈವ ಹಾಗೂ ಲಿಂಗಾಯತ ಎಲ್ಲರೂ ಕೇಳುತ್ತಿರುವುದು ಅಲ್ಪಸಂಖ್ಯಾತ ಮಾನ್ಯತೆ ಬೇಕು ಎಂಬುದಾಗಿದೆ ಎಂದು ಸ್ಪಷ್ಟ ಪಡಿಸಿದರು.
Comments