ಕರೆ ಮಾಡಿ ಸಚಿವ ಮಂಜು ಹೇಳಿಕೆ ಸುಳ್ಳೆಂದು ಸಾಬೀತು ಪಡಿಸಿದ ಎಚ್ ಡಿ ರೇವಣ್ಣ

ರೇಷ್ಮೆ ಮತ್ತು ಪಶುಸಂಗೋಪನಾ ಸಚಿವ ಎ.ಮಂಜು ಅವರು ಕೆಎಂಎಫ್ ನಷ್ಟದಲ್ಲಿ ನಡೆಯುತ್ತಿಲ್ಲ. ಕೆಎಂಎಫ್ 12 ಮಹಾಮಂಡಳಿಗಳು ಲಾಭದಲ್ಲಿವೆ. ಬೆಣ್ಣೆ ಸಂಗ್ರಹ ಇಲ್ಲ ಎಂದು ಹೇಳಿದ್ದರು. ಸಚಿವ ಎ.ಮಂಜು ಅವರಿಗೆ ಸವಾಲ್ ಹಾಕಿದ ಅವರು, 10 ಕೆಎಂಎಫ್ ಮಹಾಮಂಡಳಿಗಳು ನಷ್ಟದಲ್ಲಿ ನಡೆಯುತ್ತಿವೆ. ಪ್ರಸಕ್ತ ಸಾಲಿನಲ್ಲಿ 115 ಕೋಟಿ ರೂ. ಲಾಸ್ ನಲ್ಲಿ ನಡೆಯುತ್ತಿದೆ ಎಂದು ಅಂಕಿ ಅಂಶಗಳ ಸಮೇತ ಮಾಹಿತಿ ನೀಡಿದರು.
ಆದರೆ ಸಚಿವರ ಹೇಳಿಕೆ ಕುರಿತು ಪತ್ರಕರ್ತರು ಮರು ಪ್ರಶ್ನೆ ಹಾಕಿದ ವೇಳೆ ಕೂಡಲೇ ಕೆಎಂಎಫ್ ನ ಮಾರುಕಟ್ಟೆ ನಿರ್ದೇಶಕರಿಗೆ ಪತ್ರಿಕಾಗೋಷ್ಠಿಯ ಮಧ್ಯೆ ರೇವಣ್ಣ ದೂರವಾಣಿ ಕರೆ ಮಾಡಿದರು. ಈ ವೇಳೆ ಮಾತನಾಡಿದ ಅಧಿಕಾರಿ, ಸದ್ಯ 7 ಸಾವಿರ ಮೆಟ್ರಿಕ್ ಟನ್ ಬೆಣ್ಣೆ ಸ್ಟಾಕ್ ಇದೆ. ಕೆನೆರಹಿತ ಹಾಲಿನ ಪುಡಿ 16,680 ಮೆಟ್ರಿಕ್ ಟನ್ ಸ್ಟಾಕ್ ಇದೆ ಎಂದು ಮಾಹಿತಿ ನೀಡಿದರು.
Comments