ಕಾಂಗ್ರೆಸ್ ನ 12 ವಿಕೆಟ್ ಜೆಡಿಎಸ್ ಪಾಲಾಗಲಿದ್ಯಾ?

ಕೊಪ್ಪಳ ಅಕ್ಷರ ಸಹ ಆ್ಯಂಟಿ ಕಾಂಗ್ರೆಸ್ ಆಗಿ ಪರಿಣಮಿಸುತ್ತಿದೆ. ಸಿಎಂ ಸಿದ್ದರಾಮಯ್ಯನವರು ಇಕ್ಬಾಲ್ ಅನ್ಸಾರಿಗೆ ಟಿಕೆಟ್ ಎಂದು ಘೋಷಣೆ ಮಾಡುತ್ತಿದಂತೆ ಮಾಜಿ ಎಂಎಲ್ಸಿ, ಕಾಂಗ್ರೆಸ್ ಮುಖಂಡ ಶ್ರೀನಾಥ್ರವರು ಡಾ. ಪರಮೇಶ್ವರ್ ಅವರಿಗೆ ರಾಜಿನಾಮೆ ಪತ್ರ ಕಳುಹಿಸಿದ್ದರು.
ಇದೀಗ ಮಾಜಿ ಎಂಎಲ್ಸಿ ಶ್ರೀನಾಥ್ರವರ ಬೆಂಬಲಿಗರಾದ 12ಜನ ಗಂಗಾವತಿ ನಗರಸಭಾ ಸದಸ್ಯರೂ ಕೂಡ ಕಾಂಗ್ರೆಸ್ ತೊರೆದು ಭಿನ್ನಮತದ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಸದ್ಯ ಕಾಂಗ್ರೆಸ್ ಪಕ್ಷವನ್ನು ಮಾತ್ರ ತೊರೆದಿದ್ದು, 12ಜನ ಗಂಗಾವತಿ ನಗರಸಭಾ ಸದಸ್ಯರೂ ಕೂಡ ಮುಂದೆ ತಮ್ಮ ನಾಯಕರಾದ ಮಾಜಿ ಎಂಎಲ್ಸಿ ಶ್ರೀನಾಥ್ರವರು ಏನು ಹೇಳುತ್ತಾರೆಯೋ ಹಾಗೇ ಮಾಡುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದು, ನಗರಸಭೆ ಗದ್ದುಗೆ ಅಲುಗಾಡುವಂತೆ ಮಾಡಿದ್ದಾರೆ.
ಜೊತೆಗೆ ಚುನಾವಣೆಯ ಹತ್ತಿರದ ದಿನಗಳಲ್ಲಿ ಈ ಪರಿಯ ಭಿನ್ನಮತ ಕಾಂಗ್ರೆಸ್ ಪಕ್ಷಕ್ಕೆ ಕೊಪ್ಪಳದಲ್ಲಿ ಬಾರಿ ಹೊಡೆತ ಕೊಡಬಹುದು ಎಂಬ ಚರ್ಚೆ ಕೊಪ್ಪಳದಲ್ಲಿ ಈಗಾಲೇ ಅರಿದಾಡುತ್ತಿದೆ. ಅಷ್ಟೇ ಅಲ್ಲಾ ಈಗಾಗಲೇ ಕಾಂಗ್ರೆಸ್ ರಾಜಿನಾಮೆ ನೀಡಿರುವ ಮಾಜಿ ಎಂಎಲ್ಸಿ ಶ್ರೀನಾಥ್ರವರು ಏನಾದರೂ ಜೆಡಿಎಸ್ ಕಡೆ ಮುಖ ಮಾಡಿದರೇ ನಿಜಕ್ಕೂ ಕಾಂಗ್ರೆಸ್ ಪಕ್ಷಕ್ಕೆ ಕೇವಲ ಕೊಪ್ಪಳ ಮಾತ್ರವಲ್ಲದೇ ಅಕ್ಕಪಕ್ಕದ 2 ರಿಂದ ಮೂರು ಕ್ಷೇತ್ರಗಳಲ್ಲಿಯೂ ಆ್ಯಂಟಿ ಅಲೆಯನ್ನು ಎದುರಿಸ ಬೇಕಾಗಬಹುದು ಎಂಬುದು ಕೊಪ್ಪಳ ಜಿಲ್ಲೆಯ ರಾಜಕಾರಣವನ್ನು ಹತ್ತಿರದಿಂದ ನೋಡಿರುವ ರಾಜಕೀಯ ವಿಮರ್ಶಾತ್ಮಕರ ವಾದವಾಗಿದೆ.
Comments