ಮಹಾದಾಯಿ ವಿವಾದ: ಡೇಟ್ ಫಿಕ್ಸ್ ಮಾಡಿ ಗೋವಾ ಸಿಎಂಗೆ ಸಿದ್ದರಾಮಯ್ಯ ಪತ್ರ

ರಾಜಕೀಯ ವಿಷಯವಾಗಿ ಮಾರ್ಪಾಟಾಗಿರುವ ಮಹಾದಾಯಿ ನದಿ ನೀರಿನ ವಿವಾದ ತಾರಕ್ಕೇರಿರುವ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರಿಗೆ ಪತ್ರವೊಂದನ್ನು ಬರೆದಿದ್ದು, ವಿವಾದ ಕುರಿತು ಶೀಘ್ರವೇ ಮಾತುಕತೆಗೆ ದಿನಾಂಕ ಹಾಗೂ ಸ್ಥಳ ನಿಗದಿ ಮಾಡುವಂತೆ ಕೋರಿದ್ದಾರೆ.
ಪರಿಕ್ಕರ್ ಅವರಿಗೆ 2 ಪುಟಗಳ ಪತ್ರ ಬರೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ಹಿಂದೆ ನಾನು ಬರೆದಿದ್ದ ಪತ್ರಕ್ಕೆ ತಾವು ಈವರೆಗೂ ಯಾವುದೇ ರೀತಿಯ ಪ್ರತಿಕ್ರಿಯೆಗಳನ್ನು ನೀಡಿರಲಿಲ್ಲ. ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಪತ್ರಕ್ಕೆ ಪ್ರತಿಕ್ರಿಯೆ ನೀಡಿ ಪತ್ರ ಬರೆದಿದ್ದೀರಿ. ಈ ಪತ್ರಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಮಹಾದಾಯಿ ನ್ಯಾಯಾಧೀಕರಣದ ಸೂಚನೆ ಅನ್ವಯ ಆದಷ್ಟು ಬೇಗನೆ ಸಭೆ ನಡೆಸಲು ಮುಂದೆ ಬನ್ನಿ ಎಂದು ಮನವಿ ಮಾಡಿದ್ದಾರೆ. ಯಡಿಯೂರಪ್ಪ ಅವರಿಗೆ ಪರಿಕ್ಕರ್ ಅವರು ಪತ್ರ ಬರೆದು ಪ್ರತಿಕ್ರಿಯೆ ನೀಡಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ಸಿದ್ದರಾಮಯ್ಯ ಅವರು, ಒಂದೂವರೆ ವರ್ಷದಿಂದ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರಿಗೆ ಪತ್ರ ಬರೆಯುತ್ತಿದ್ದರೂ ಉತ್ತರ ಕೊಡುತ್ತಿರಲಿಲ್ಲ.
ಆದರೆ, ಇದೀಗ ಮಾಜಿ ಸಿಎಂ ಯಡಿಯೂರಪ್ಪ ಅವರ ಪತ್ರಕ್ಕೆ ಉತ್ತರ ನೀಡಿರುವ ಹಿಂದಿನ ಉದ್ದೇಶವೇನು ಎಂದು ಪ್ರಶ್ನಿಸಿದ್ದಾರೆ.ಮಹದಾಯಿ ನದಿ ನೀರಿನ ವಿವಾದಕ್ಕೆ ಮಾತುಕತೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಹಾಗೂ ತಮಗೆ ಗೋವಾ ಸಿಎಂ ಪತ್ರ ಬರೆಯಬೇಕಿತ್ತು. ಆದರೆ, ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಗೋವಾ ಮುಖ್ಯಮಂತ್ರಿ ನಡೆಯಿದಂ ಬೇಸರವಾದರೂ ಶುಕ್ರವಾರ ಅವರಿಗೆ ಮತ್ತೊಂದು ಪತ್ರ ಬರೆದು 3 ರಾಜ್ಯಗಳ ಸಿಎಂ ಸಭೆ ನಡೆಸಲು ಮನವಿ ಮಾಡಿದ್ದೇನೆ. ಮಧ್ಯಂತ್ರವಾಗಿ 7.56 ಟಿಎಂಸಿ ನೀರು ಪಡೆಯಲು ನಮಗೆ ಹಕ್ಕಿದೆ ಎಂದು ತಿಳಿಸಿದ್ದೇನೆಂದು ಹೇಳಿದ್ದಾರೆ.
Comments