ಮಹದಾಯಿ ವಿಚಾರವಾಗಿ ಮಾಜಿ ಪ್ರಧಾನಿ ದೇವೇಗೌಡರು ಏನಂದ್ರು?

ಗುಜರಾತ್ ಎಲೆಕ್ಷನ್ ಮುಗಿದ ಬಳಿಕ ಸಮಸ್ಯೆಗೆ ಒಂದು ಪರಿಹಾರ ಕಂಡು ಹಿಡಿಯಲೇ ಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಗೋವಾ, ಮಹಾರಾಷ್ಟ್ರ ಸಿಎಂಗಳ ಸಭೆ ನಡೆಸಿದರು. ಆ ಸಭೆಯಲ್ಲಿ ನಮ್ಮ ರಾಜ್ಯದ ಯಡಿಯೂರಪ್ಪ ಅವರೂ ಭಾಗಿಯಾಗಿದ್ದರು. ಸಭೆಯಲ್ಲಿ ಒಂದು ತೀರ್ಮಾನಕ್ಕೆ ಬರಲೇಬೇಕು ಎಂದು ಸೂಚನೆ ಕೊಟ್ಟರು. ಆದರೆ ದೆಹಲಿಯಿಂದ ಬಂದ ನಂತರ ಸರ್ಕಾರ ಉಳಿಸಿಕೊಳ್ಳಲು ಗೋವಾ ಸಿಎಂ ಏನು ಹೇಳಿಕೆ ನೀಡಿದರು ಎಂಬುದು ನಾಡಿನ ಜನರಿಗೆ ತಿಳಿದಿದೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದರು.
ಮಾಜಿ ಪ್ರಧಾನಿ ಹೆಚ್‍ಡಿ ದೇವೇಗೌಡರು ಹಾಸನದಲ್ಲಿ ಮಾತನಾಡಿದ್ದು, ಕರ್ನಾಟಕಕ್ಕೆ ಎಷ್ಟು ಕುಡಿಯುವ ನೀರು ಕೊಡಬೇಕು ಎಂಬುದು ನ್ಯಾಯಾಧಿಕರಣದ ಮುಂದೆಯೇ ತೀರ್ಮಾನವಾಗಬೇಕು ಎಂದು ಗೋವಾ ಸಿಎಂ ಹೇಳಿದ್ದಾರೆ. ಆದರೆ ನೀರು ಹಂಚಿಕೆ ನಿಗದಿ ಮಾಡಿದ ನಂತರವೂ ಚರ್ಚೆಗೆ ಗ್ರಾಸವಾಗಲಿದೆ. ಹೀಗಾಗಿ ಇದು ಬಗೆಹರಿಯದ ಸಮಸ್ಯೆ ಎಂದರು.
Comments