ಬೆಂಗಳೂರಿನಲ್ಲಿ ಅನುಷ್ಕಾ-ಕೊಹ್ಲಿ ರಿಸೆಪ್ಷನ್

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ರಿಸೆಪ್ಷನ್ ದೆಹಲಿಯಲ್ಲಿ ಅದ್ಧೂರಿಯಾಗಿ ನಡೆದಿದೆ. ಡಿಸೆಂಬರ್ 26ರಂದು ಮುಂಬೈನಲ್ಲಿ ಅನುಷ್ಕಾ ಜೋಡಿ ಗ್ರ್ಯಾಂಡ್ ಪಾರ್ಟಿ ನೀಡಲಿದೆ. ಆದ್ರೆ ಇವೆಲ್ಲಕ್ಕೂ ಮುನ್ನ ಬೆಂಗಳೂರಿನಲ್ಲಿ ಅಭಿಮಾನಿಗಳು ತಮ್ಮದೆ ರೀತಿಯಲ್ಲಿ ಅನುಷ್ಕಾ-ಕೊಹ್ಲಿ ರಿಸೆಪ್ಷನ್ ಆಚರಿಸಿದ್ದಾರೆ.
ಯಸ್, ಬೆಂಗಳೂರಿನಲ್ಲಿ ಅನುಷ್ಕಾ-ಕೊಹ್ಲಿ ರಿಸೆಪ್ಷನ್ ನಡೆದಿದೆ. ಇದ್ರಲ್ಲಿ ಅನುಷ್ಕಾ-ಕೊಹ್ಲಿ ಇಬ್ಬರು ಇದ್ರು. ಆದ್ರೆ ಕೇಕ್ ರೂಪದಲ್ಲಿ. ಸದ್ಯ ಬೆಂಗಳೂರಿನಲ್ಲಿ ಕೇಕ್ ಶೋ ನಡೆಯುತ್ತಿದೆ. ಎಂದಿನಂತೆ ಈ ವರ್ಷ ಕೂಡ ಬೆಂಗಳೂರಿನಲ್ಲಿ ಕೇಕ್ ಶೋ ನಡೆಯುತ್ತಿದೆ. ದೇಶದಲ್ಲಿಯೇ ಅತಿ ದೊಡ್ಡ ಕೇಕ್ ಶೋ ಎಂದು ಹೆಸರು ಪಡೆದಿರುವ ಈ ಶೋನಲ್ಲಿ ಈ ಬಾರಿ ಗಮನ ಸೆಳೆದಿದ್ದು ಅನುಷ್ಕಾ-ವಿರಾಟ್. ದಂಪತಿ ಸೋಫಾ ಮೇಲೆ ಕುಳಿತಿರುವ ರೀತಿಯಲ್ಲಿ ಕೇಕ್ ತಯಾರಿಸಲಾಗಿದೆ. ವಿನೋದದ ವಿಷ್ಯವೆಂದ್ರೆ ಅನುಷ್ಕಾ ಕೈನಲ್ಲಿರುವ ಭಿತ್ತಿಚಿತ್ರ. ಡಕ್ ಔಟ್ ಎಂಬ ಪೋಸ್ಟರ್ ಅನುಷ್ಕಾ ಕೈನಲಿದೆ.
Comments